OIC ಸಭೆಯಲ್ಲಿ ಕಾಶ್ಮೀರದ ಬಗ್ಗೆ ಮಾತಾಡಿದ ಖಾನ್!

masthmagaa.com:

ತನ್ನ ಪಿಎಂ ಕುರ್ಚಿಗೆ ಬೆಂಕಿ ಹತ್ತಿ ಉರೀತಿದ್ರೂ ಕೂಡ ಪಾಕ್‌ನ ಇಮ್ರಾನ್‌ ಮಾತ್ರ ಈಗ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಬಿಸಿಯಾಗ್ಬಿಟ್ಟಿದ್ದಾರೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ OIC ಅಂದ್ರೆ ಆರ್ಗನೈಜೇಶನ್‌ ಆಫ್‌ ಕೋ ಆಪರೇಶನ್‌ ʼಜಾಗತಿಕ ಮುಸ್ಲಿಂ ಸಹಕಾರ ಸಂಘಟನೆʼಯ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಕಳೆದ ವಾರವಷ್ಟೇ ವಿಶ್ವಸಂಸ್ಥೆ ಇಸ್ಲಾಮೋಪೋಬಿಯಾ ಅನ್ನೋದು ಗಂಭೀರ ಜಾಗತಿಕ ಸಮಸ್ಯೆ ಅಂತ ಪುನರುಚ್ಚಾರ ಮಾಡಿತ್ತು. ಈ ಬೆನ್ನಲ್ಲೇ ಮುಸ್ಲಿಂ ರಾಷ್ಟ್ರಗಳ ಸಭೆ ಕರೆದಿರುವ ಇಮ್ರಾನ್ ಖಾನ್, ಇಸ್ಲಾಮೋಪೋಬಿಯಾ ಹಾಗು ಇನ್ನಿತರ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದಾರೆ. ಈ ವಿಚಾರವಾಗಿ ಪರಸ್ಪರ ಸಹಕಾರ ಹಾಗು ಜಾಗತಿಕ ಸಮಸ್ಯೆಗಳ ಕುರಿತು ಕೈಗೊಳ್ಳಬೇಕಾದ 100 ನಿರ್ಣಯಗಳನ್ನ ಘೋಷಣೆ ಮಾಡಲಾಗಿದೆ. ಇದರಲ್ಲಿ ಅಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿ ಹಾಗು ಪ್ಯಾಲೆಸ್ತೇನ್​​ ಬಗ್ಗೆ ಕೂಡ ಚರ್ಚೆ ಮಾಡಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಇನ್ನು ವಾಡಿಕೆಯಂತೆ ಇದೇ ಸಂದರ್ಭದಲ್ಲಿ ಕಾಶ್ಮೀರ ವಿಚಾರವನ್ನೂ ಎಳೆದು ತಂದಿರುವ ಇಮ್ರಾನ್‌, ಕಾಶ್ಮೀರ ವಿಚಾರವಾಗಿ ನಮಗೆ ಸಪೋರ್ಟ್‌ ಮಾಡ್ಬೇಕು ಅಂತ ಹೇಳೋ ಮೂಲಕ ಭಾರತವನ್ನ ಮತ್ತೆ ಕೆಣಕಿದ್ದಾರೆ.

ಇನ್ನು ಪ್ರಧಾನಿ ಹುದ್ದೆ ಕೈತಪ್ಪುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗ್ತಿದ್ದ ಹಾಗೆ ಅದ್ನ ಉಳಿಸಿಕೊಳ್ಳಲು ಸರ್ಕಸ್‌ ಮೇಲೆ ಸರ್ಕಸ್‌ ಮಾಡ್ತಿದ್ದಾರೆ ಇಮ್ರಾನ್‌ ಖಾನ್‌. ಮುಂದಿನ ಶುಕ್ರವಾರ ತಮ್ಮ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಯಾಗುತ್ತಿದೆ. ಇತ್ತ ಇಮ್ರಾನ್‌ ಖಾನ್‌ ಕೂಡ ಪ್ರತಿಪಕ್ಷಗಳಿಗೆ ಟಕ್ಕರ್‌ ಕೊಡೋಕೆ ಮುಂದಾಗಿದ್ದಾರೆ. ಈ ಪ್ರತಿಕ್ರಿಯಿಸಿರೋ ಅವರು” ಮುಂದಿನ ವಾರದಲ್ಲಿ ರಾಜಧಾನಿ ಇಸ್ಲಾಮಾಬಾದ್‌ ನಲ್ಲಿ ಬೃಹತ್‌ ಸಮಾವೇಶವನ್ನ ಹಮ್ಮಿಕೊಂಡಿದ್ದು, ಲಕ್ಷಾಂತರ ಬೆಂಬಲಿಗರು ಬಂದು ಸೇರಬೇಕು” ಅಂತ ಕರೆ ನೀಡಿದ್ದಾರೆ.

ಸರ್ಕಾರದಲ್ಲಿರುವ ಭಿನ್ನಮತೀಯರಿಗೆ ಸರ್ಕಾರದಿಂದ ಉಚ್ಚಾಟನೆ ಮಾಡುವ ಬಗ್ಗೆ ಸುಪ್ರೀಕೋರ್ಟ್‌ ಸರ್ಕಾರ ಇಮ್ರಾನ್‌ ಸಲಹೆ ಕೇಳಿದೆ. ಇನ್ನು ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದಿಂದ ಹೊರ ಹೋಗುವವರಿಗೆ ಅರ್ಥಾತ್‌ ಪಕ್ಷಾಂತರಿಗಳನ್ನು ಜೀವಮಾನವಿಡೀ ಚುನಾವಣೆಗೆ ಸ್ಪರ್ಧಿಸದಂತೆ ಯಾಕೆ ಅನರ್ಹಗೊಳಿಸಬಾರದು ಅಂತ ಸುಪ್ರೀಂಕೋರ್ಟ್​​​ಗೆ ಪ್ರಶ್ನಿಸಿದೆ. ಈ ಸಂಬಂಧ ಸಲಹೆ ನೀಡುವಂತೆಯೂ ಮನವಿ ಮಾಡಿದೆ ಅಂತ ಪಾಕ್ ಸರ್ಕಾರದ ಅಟಾರ್ನಿ ಜನರಲ್ ಖಾಲೀದ್ ಜಾವೇದ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply