ಭಾರತದಲ್ಲಿ ನಡೆಯಲಿರುವ SCO ಸಭೆಗೆ ಪಾಕಿಸ್ತಾನ ಗೈರು! ಕಾರಣವೇನು?

masthmagaa.com:

ಭಾರತದಲ್ಲಿ ಇಂದಿನಿಂದ ಮೂರು ದಿನ ನಡೆಯಲಿರುವ Shanghai Cooperation Organisation (SCO) ದೇಶಗಳ ಸಭೆಯಲ್ಲಿ ಭಾಗವಹಿಸಲ್ಲ ಅಂತ ಪಾಕಿಸ್ತಾನ ಹೇಳಿದೆ. ದೆಹಲಿಯಲ್ಲಿ ಮಾರ್ಚ್‌ 10 ಅಂದ್ರೆ ಇಂದಿನಿಂದ ಮಾರ್ಚ್‌ 12ರ ವರೆಗೆ SCO ಗುಂಪಿನ ದೇಶಗಳ ಮುಖ್ಯ ನ್ಯಾಯಾಧೀಶರ ಸಭೆ ನಡೆಯಲಿದೆ. ಈ ಸಭೆಯ ದಿನಾಂಕಗಳಂದು ಪಾಕಿಸ್ತಾನದ ಸಿಜೆಐ ಅವ್ರಿಗೆ ಪ್ರಮುಖ ಅನಿವಾರ್ಯ ಕೆಲಸಗಳಿರೊ ಕಾರಣದಿಂದ ಸಭೆಗೆ ಬರಲು ಸಾಧ್ಯವಿಲ್ಲ, ಇದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಅಂತ ಪಾಕಿಸ್ತಾನ ಹೇಳಿದೆ. ಇತ್ತ SCO ದೇಶಗಳ ವಿದೇಶಾಂಗ ಸಚಿವರ ಸಭೆಯನ್ನ ಮೇ ತಿಂಗಳಲ್ಲಿ ಆಯೋಜಿಸಲಿದ್ದು, ಈ ಸಭೆಯಲ್ಲಿ ಕೂಡ ಪಾಕಿಸ್ತಾನ ಭಾಗವಹಿಸುತ್ತಾ ಇಲ್ವಾ ಅನ್ನೋದು ಇನ್ನೂ ಕನ್ಫರ್ಮ್ ಮಾಡಿಲ್ಲ. ಅಂದ್ಹಾಗ ಜಿ20 ಜೊತೆ ಪ್ರಸ್ತುತ ವರ್ಷದ SCO ಅಧ್ಯಕ್ಷತೆಯನ್ನ ಭಾರತ ವಹಿಸಿಕೊಂಡಿದ್ದು, ಈ ವರ್ಷ ಶೃಂಗಸಭೆಯನ್ನ ನಡೆಸಲಿದೆ. ಅದಕ್ಕೂ ಮುನ್ನ ಪೂರ್ವಭಾವಿ ಸಭೆಗಳನ್ನ ಮಾಡ್ತಿದೆ. ಅಂದ್ಹಾಗೆ ಭಾರತ, ರಷ್ಯಾ, ಚೀನಾ, ಪಾಕಿಸ್ತಾನ, ಕಝಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ ಹಾಗೂ ಇರಾನ್‌ SCO ಸದಸ್ಯ ರಾಷ್ಟ್ರಗಳಾಗಿವೆ.

-masthmagaa.com

Contact Us for Advertisement

Leave a Reply