ಸ್ಫೋಟಕ ಪಾಕ್‌ ನ್ಯೂಕ್ಲಿಯರ್‌ ರಿಪೋರ್ಟ್!

masthmagaa.com:

ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ಪರಮಾಣು ಅಸ್ತ್ರಗಳ ಕುರಿತು ವರದಿಯೊಂದು ಬಹಿರಂಗವಾಗಿದೆ. ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂ ಅನ್ನುವ ಹಾಗೆ ಪಾಕಿಸ್ತಾನ ತನ್ನ ಜನರಿಗೆ ಬೇಸಿಕ್ ಅವಶ್ಯಕತೆಗಳನ್ನ ಪೂರೈಸುವಲ್ಲಿ ವಿಫಲವಾಗ್ತಿದ್ರೂ, ದೇಶದ ಪರಮಾಣು ಶಸ್ತ್ರಾಸ್ತ್ರಗಳನ್ನ ಹೆಚ್ಚು ಮಾಡಿಕೊಳ್ಳೊಕೆ ಹವಣಿಸ್ತಿರೊ ವಿಷಯ ವರದಿಯಲ್ಲಿ ರಿವೀಲ್‌ ಆಗಿದೆ. Federation of American Scientists ಈ ವರದಿಯನ್ನ ರಿಲೀಸ್‌ ಮಾಡಿದೆ. ಅದ್ರಲ್ಲಿ ಪಾಕಿಸ್ತಾನದ ಆರ್ಥಿಕತೆ ತಲೆಕೆಳಗಾಗಿದೆ. ಇಂಧನ ದರ, ಆಹಾರ ದರ ಗಗನಕ್ಕೇರಿದೆ. ಪೆಟ್ರೋಲ್‌ ದರ ಲೀಟರ್‌ಗೆ 300 ರೂಪಾಯಿ ಆಗಿದ್ದು, ಜನರು ಹಣದುಬ್ಬರದ ವಿರುದ್ಧ ಪ್ರತಿಭಟನೆ ಮಾಡ್ತಿದಾರೆ. ಈ ಆರ್ಥಿಕ ಅಸ್ಥಿರತೆ ಸುಧಾರಿಸೋಕೆ ಚೀನಾ, ಗಲ್ಫ್‌ ರಾಷ್ಟ್ರಗಳು ಹಾಗೂ IMF ಮುಂದೆ ಪಾಕ್‌ ಸಾಲಕ್ಕಾಗಿ ಬೇಡ್ತಿದೆ. ಇಷ್ಟೆಲ್ಲ ಸಂಕಷ್ಟ ಇದ್ರೂ, ಪಾಕ್‌ ತನ್ನ ಪರಮಾಣು ಸಾಮರ್ಥ್ಯವನ್ನ ವಿಸ್ತರಿಸೋಕೆ ಮುಂದಾಗಿದೆ ಅಂತ ಹೇಳಲಾಗಿದೆ. ಹೆಚ್ಚಿನ ನ್ಯೂಕ್ಲಿಯರ್ ವಾರ್‌ಹೆಡ್‌ಗಳನ್ನ ಹೊಂದುವ ಮೂಲಕ ನಿಧಾನವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನ ಹೆಚ್ಚಿಸುವತ್ತ ಪಾಕ್‌ ಹೆಜ್ಜೆ ಇಡ್ತಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಕಮರ್ಶಿಯಲ್‌ ಸ್ಯಾಟ್‌ಲೈಟ್‌ ಇಮೇಜ್‌ಗಳನ್ನ ವಿಶ್ಲೇಷಿಸಿದ್ದು, ಪಾಕ್‌ನ ಶಸ್ತ್ರಾಸ್ತ್ರ ಡಿಪೋ ಹಾಗೂ ಏರ್‌ ಫೋರ್ಸ್‌ ನೆಲೆಗಳಲ್ಲಿ ಹೊಸ ನಿರ್ಮಾಣ ಚಟುವಟಿಕೆಗಳನ್ನ ಪತ್ತೆ ಹಚ್ಚಲಾಗಿದೆ. ಅಲ್ದೇ ವಾಯು ನೆಲೆಗಳಲ್ಲಿ ನೂತನ ಲಾಂಚರ್‌ಗಳು, ನ್ಯೂಕ್ಲಿಯರ್‌ ಫೆಸಿಲಿಟಿಗಳು ಇರೋದಾಗಿ ಶಂಕಿಸಲಾಗಿದೆ. ವರದಿಯ ಪ್ರಕಾರ ಪ್ರಸ್ತುತ ಪಾಕ್‌ ಸುಮಾರು 170 ವಾರ್‌ಹೆಡ್‌ಗಳನ್ನ ಹೊಂದಿದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಈಗಿನ ಬೆಳವಣಿಗೆಯನ್ನ ಗಮನಿಸಿದರೆ ಈ ಸಂಗ್ರಹ 2025ರ ವೇಳೆಗೆ 200ರ ಗಡಿ ದಾಟುವ ಸಾಧ್ಯತೆಯಿದೆ ಅಂತ ಹೇಳಲಾಗಿದೆ. ಜೊತೆಗೆ ಸದ್ಯ ಪಾಕಿಸ್ತಾನ 14 ರಿಂದ 27 ನೂತನ ವಾರ್‌ಹೆಡ್‌ಗಳನ್ನ ನಿರ್ಮಾಣ ಮಾಡುವಷ್ಟು ಫಿಸೈಲ್‌ ಮಟಿರಿಯಲ್‌ನ್ನ ಪ್ರೊಡ್ಯುಸ್‌ ಮಾಡ್ತಿದೆ. ಪಾಕಿಸ್ತಾನದ ಮಿರಾಜ್‌ 3 ಹಾಗು ಮಿರಾಜ್‌ 5 ಜೆಟ್‌ಗಳು ನ್ಯೂಕ್ಲಿಯಾರ್‌ ಸಾಮರ್ಥ್ಯ ಹೊಂದಿರೊ ಏರ್‌ಕ್ರಾಫ್ಟ್‌ಗಳಾಗಿವೆ. ಈ ಮಿರಾಜ್‌ ಫೈಟರ್‌ ಬಾಂಬರ್‌ಗಳನ್ನ ಪಾಕ್‌ ತನ್ನ ಮಸ್ರೂರ್‌ ಏರ್‌ ಬೇಸ್‌ಗಳಲ್ಲಿ ನಿಲ್ಲಿಸಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಮಸ್ರೂರ್‌ನಿಂದ 5 ಕಿಲೋ ಮೀಟರ್‌ ದೂರದಲ್ಲಿ ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳ ಸ್ಟೋರೇಜ್‌ ಇರಬಹುದು ಅಂತ ಶಂಕೆ ವ್ಯಕ್ತಪಡಿಸಲಾಗಿದೆ.

-masthmagaa.com

Contact Us for Advertisement

Leave a Reply