ಪ್ಯಾಸೆಂಜರ್‌ ವಾಹನಗಳ ಮಾರಾಟ ಏರಿಕೆ: EV ಮಾರಾಟದಲ್ಲೂ ಹೆಚ್ಚಳ

masthmagaa.com:

ಫೆಬ್ರವರಿ ತಿಂಗಳಲ್ಲಿ ಭಾರತದ ಪ್ಯಾಸೆಂಜರ್‌ ವಾಹನ(PV)ಗಳ ಮಾರಾಟ ಪ್ರಮಾಣದಲ್ಲಿ ಸಾರ್ವಕಾಲಿಕ ಗರಿಷ್ಠ ಬೆಳವಣಿಗೆ ಕಂಡಿದೆ. ಫೆಡರೇಷನ್‌ ಆಫ್‌ ಅಟೊಮೊಬೈಲ್‌ ಡೀಲರ್ಸ್‌ ಅಸೋಸಿಯೇಷನ್‌ ಅಥವಾ FADA ಡೇಟಾದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. PV ಮಾರಾಟದಲ್ಲಿ YoY 12% ಜಾಸ್ತಿಯಾಗಿದೆ ಅಂತ FADA ಹೇಳಿದೆ. ಆದ್ರೆ ಈ ಸೆಗ್ಮೆಂಟ್‌ನ ಹೆಚ್ಚಿನ ಇನ್ವೆಂಟರಿ ಲೆವೆಲ್‌ ಅಂದ್ರೆ ನಿರೀಕ್ಷೆಗಿಂತ ಹೆಚ್ಚಿನ ಬೆಳವಣಿಗೆ ಕಂಡಿರೋದು ಷೇರುದಾರರಲ್ಲಿ ಆತಂಕ ತಂದಿದೆ. ಇನ್ನು ಟೂ ವೀಲರ್‌ ಸೇಲ್ಸ್‌ನಲ್ಲಿ YoY 13% ಏರಿಕೆ ಕಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಟೂ ವೀಲರ್ ಖರೀದಿ ಜಾಸ್ತಿಯಾಗಿರೋದು ಈ ಸೆಕ್ಟರ್‌ಗೆ ಬೂಸ್ಟ್‌ ನೀಡಿದೆ. 3 ವೀಲರ್‌ ಸೇಲ್ಸ್‌ನಲ್ಲಿ ಅತಿಹೆಚ್ಚು ಅಂದ್ರೆ YoY 24% ಏರಿಕೆ ಕಂಡಿದೆ. ಇದ್ರಲ್ಲಿ ಅರ್ದಕ್ಕರ್ಧ ಇವಿಗಳು ಸೇಲ್‌ ಆಗಿರೋದು ವಿಶೇಷ

-masthmagaa.com

Contact Us for Advertisement

Leave a Reply