ಟೈಟಾನ್‌ ನೋಡೋಕೆ ಹೋದೋರು ಪ್ಯಾಸೆಂಜರ್‌ಗಳೇ ಅಲ್ಲಾ! ಹಾಗಾದ್ರೆ ಮತ್ತೇನು?

masthmagaa.com:

ಅಟ್ಲಾಂಟಿಕ್‌ ಸಾಗರದಲ್ಲಿರೋ ಟೈಟಾನಿಕ್‌ ಹಡಗಿನ ಅವಶೇಷಗಳನ್ನ ನೋಡೋಕೆ ಹೋಗಿದ್ದ 5 ಜನ ಶ್ರೀಮಂತರು ಮೃತಪಟ್ಟ ನಂತ್ರ ಈ ಪ್ರವಾಸದ ಬಗ್ಗೆ ಒಂದೊಂದೇ ಮಾಹಿತಿ ಹೊರಬರ್ತಿವೆ. ಇದೀಗ ಟೈಟಾನ್‌ ಸಬ್‌ಮರ್ಸಿಬಲ್‌ನಲ್ಲಿ ಈ ಸಾಹಸ ಪ್ರವಾಸ ಕೈಗೊಳ್ಳೋರನ್ನ ಪ್ಯಾಸೆಂಜರ್‌ ಅಂತ ಕರೆಯೋದಿಲ್ಲ ಅನ್ನೋ ಮಾಹಿತಿ ಗೊತ್ತಾಗಿದೆ. ಈ ಸಬ್‌ಮರ್ಸಿಬಲ್‌ನಲ್ಲಿ ಪ್ರವಾಸ ಹೋಗೋರಿಗೆ ʻಮಿಷನ್‌ ಸ್ಪೆಷಲಿಸ್ಟ್‌ʼ ಟಂತ ಕರೆಯಲಾಗುತ್ತೆ. ಪ್ರವಾಸದ ವೇಳೆ ಪ್ಯಾಸೆಂಜರ್ಸ್‌ ಜೀವಕ್ಕೆ ಅಪಾಯವಾದಾಗ ಅಥ್ವಾ ಸಾವನ್ನಪ್ಪಿದಾಗ ಕಾನೂನು ಪರಿಣಾಮಗಳಿಂದ ಬಚಾವ್‌ ಆಗೋಕೆ ಓಷನ್‌ಗೇಟ್‌ ಕಂಪನಿ ಈ ರೀತಿ ಕರೆಯುತ್ತೆ ಎಂದು ಕಂಪನಿಯ ಮಾಜಿ ಸಲಹೆಗಾರರೊಬ್ರು ಹೇಳಿದ್ದಾರೆ. ಜೊತೆಗೆ ಟೈಟಾನ್‌ನಲ್ಲಿ ಹೋಗೋರು ಟಿಕೆಟ್‌ ಖರೀದಿ ಮಾಡಲ್ಲ. ಬದ್ಲಾಗಿ ಅವ್ರೆಲ್ಲಾ ತಮ್ಮ ಮಿಷನ್‌ಗಾಗಿ ಸುಮಾರು 2 ಕೋಟಿ ರೂಪಾಯಿಯಷ್ಟು ಹಣವನ್ನ ನೀಡ್ತಾರೆ. ಹೀಗಾಗಿ ಅವ್ರನ್ನ ಪ್ಯಾಸೆಂಜರ್‌ಗಳು ಅಂತ ಕರಿಯೋದೆ ಇಲ್ಲ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply