ಗಾಜಾ ಕದನ ವಿರಾಮ ನಿರ್ಣಯ ಪಾಸ್:‌ ಇಸ್ರೇಲ್‌ಗೆ ಕೈ ಕೊಟ್ಟ ಅಮೆರಿಕ!

masthmagaa.com:

ಗಾಜಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಣೆಯಾಗ್ಬೇಕು ಅಂತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರೆಸೊಲ್ಯೂಷನ್‌ವೊಂದಕ್ಕೆ ವೋಟಿಂಗ್‌ ನಡೆದು…ಪಾಸ್‌ ಆಗಿದೆ. ಈ ವಿಚಾರವಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಇದೀಗ ಅಮೆರಿಕ ನಡೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ʻಈ ವೋಟಿಂಗ್‌ ವೇಳೆ ಅಮೆರಿಕ ಗೈರಾಗಿ ರೆಸಲ್ಯೂಷನ್‌ ಪಾಸ್‌ ಆಗಲು ಸಾಧ್ಯವಾಯ್ತು. ಹೀಗಾಗಿ ಅಮೆರಿಕದ ಈ ನಡೆಯಿಂದ ನಮಗೆ ನೋವಾಗಿದೆʼ ಅಂತ ನೆತನ್ಯಾಹು ಹೇಳಿದ್ದಾರೆ. ಸೋ ಗಾಜಾ ಯುದ್ಧ ಕುರಿತು ಅಮೆರಿಕ ಮತ್ತು ಇಸ್ರೇಲ್‌ ನಡುವೆ ಪ್ಲಾನ್‌ ಮಾಡಿದ್ದ ಭೇಟಿಯೂ ಕ್ಯಾನ್ಸಲ್‌ ಆಗಿದೆ. ಖುದ್ದು ಇಸ್ರೇಲ್‌ ಈ ಭೇಟಿಯನ್ನ ಕ್ಯಾನ್ಸಲ್‌ ಮಾಡಿದೆ.

-masthmagaa.com

Contact Us for Advertisement

Leave a Reply