ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ.. ಪೆಟ್ರೋಲ್​-ಡೀಸೆಲ್ ರೇಟೆಷ್ಟು?

masthmagaa.com:

ಪೆಟ್ರೋಲ್​ ಮತ್ತು ಡೀಸೆಲ್​ ದರವನ್ನ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಸತತ 4ನೇ ದಿನ ಜಾಸ್ತಿ ಮಾಡಿದ ಪರಿಣಾಮ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಸೇರಿದಂತೆ ಹಲವೆಡೆ ಪೆಟ್ರೋಲ್-ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 61 ಪೈಸೆ ಜಾಸ್ತಿಯಾಗಿ 91.01 ರೂಪಾಯಿ ಆಗಿದೆ. ಡೀಸೆಲ್ ದರ 65 ಪೈಸೆ ಜಾಸ್ತಿಯಾಗಿ 83.09 ರೂಪಾಯಿ ಆಗಿದೆ. ಉಳಿದೆಂತೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ 30ರಿಂದ 35 ಪೈಸೆ ಜಾಸ್ತಿಯಾಗಿದೆ. 4 ಮಹಾನಗರಗಳ ಪೈಕಿ ಮುಂಬೈನಲ್ಲೇ ಪೆಟ್ರೋಲ್​-ಡೀಸೆಲ್ ರೇಟು ಜಾಸ್ತಿ ಇರೋದು.

-masthmagaa.com

Contact Us for Advertisement

Leave a Reply