masthmagaa.com:

ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 5ನೇ ದಿನವೂ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ 31 ಪೈಸೆ ಜಾಸ್ತಿಯಾಗಿ 91.40 ರೂಪಾಯಿ ಆಗಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ 38 ಪೈಸೆ ಜಾಸ್ತಿಯಾಗಿ 83.47 ರೂಪಾಯಿ ಆಗಿದೆ. ದೇಶದ ಮಹಾನಗರಗಳ ಪೈಕಿ ತೈಲ ದರ ಹೆಚ್ಚಿರುವ ಮುಂಬೈನಲ್ಲಿ ಪೆಟ್ರೋಲ್ ರೇಟು 29 ಪೈಸೆ ಜಾಸ್ತಿಯಾಗಿ 94.93 ರೂಪಾಯಿ ಮತ್ತು ಡೀಸೆಲ್ ರೇಟು 38 ಪೈಸೆ ಜಾಸ್ತಿಯಾಗಿ 85.70 ರೂಪಾಯಿ ಆಗಿದೆ. ಒಂದು ವಾರದಲ್ಲಿ ಪೆಟ್ರೋಲ್‌-ಡೀಸೆಲ್ ರೇಟು ಒಂದೂವರೆಯಿಂದ ಎರಡು ರೂಪಾಯಿಯಷ್ಟು ಜಾಸ್ತಿಯಾಗಿದೆ.

-masthmagaa.com

Contact Us for Advertisement

Leave a Reply