ವಿಮಾನ ಹಾರಿಸುವಾಗ ಪೈಲೆಟ್‌ ನಿದ್ರೆ: ವಿಮಾನ ಹೈಜ್ಯಾಕ್‌ ಆಯ್ತು ಅಂತ ಹೆದರಿದ ಅಧಿಕಾರಿಗಳು

masthmagaa.com:

ಇಟಲಿಯ ಪ್ರಮುಖ ವಿಮಾನ ಸಂಸ್ಥೆಯ ಪೈಲೆಟ್‌ ಒಬ್ಬ ವಿಮಾನ ಹಾರಾಟ ನಡೆಸ್ತಾ ಇರುವಾಗಲೆ ನಿದ್ದೆ ಮಾಡಿ ಪಜೀತಿ ತಂದಿಟ್ಟಿದ್ದಾನೆ. ಪೈಲಟ್‌ ಮಲಗಿದ್ರಿಂದ ಫ್ರಾನ್ಸ್‌ನ ಟ್ರಾಫಿಕ್‌ ಕಂಟ್ರೋಲರ್‌ಗೆ ಹತ್ತು ನಿಮಿಷಗಳ ಕಾಲ ವಿಮಾನದೊಂದಿಗೆ ಸಂವಹನ ನಡೆಸಲು ಸಾಧ್ಯವಾಗಿಲ್ಲ. ಆತಂಕಗೊಂಡ ಫ್ರಾನ್ಸ್ ಅಧಿಕಾರಿಗಳು ಇಟಲಿ ವಿಮಾನವನ್ನ ಉಗ್ರರು ಹೈಜ್ಯಾಕ್‌ ಮಾಡಿದ್ದಾರೆ ಅಂತ ಎರಡೆರಡು ಯುದ್ಧ ವಿಮಾನವನ್ನ ಹಾರಿಸೋಕೆ ಸಿದ್ದಪಡಿಸಿಕೊಂಡಿದ್ರು. ಜೊತೆಗೆ ಇಟಲಿ ಅಧಿಕಾರಿಗಳಿಗು ಕೂಡ ವಿಮಾನ ಹೈಜ್ಯಾಕ್‌ ಆಗಿರೋದ್ರ ಕುರಿತು ಎಚ್ಚರಿಕೆ ಕೊಟ್ಟಿದ್ದಾರೆ. ಆದ್ರೆ ನಂತ್ರ ಪೈಲಟ್‌ ಪುಣ್ಯಾತ್ಮ ಸಂಪರ್ಕಕ್ಕೆ ಸಿಕ್ಕು ವಿಚಾರಣೆ ನಡೆಸಿದಾಗ ಆತ ವಿಮಾನವನ್ನ ಅಟೋ ಪೈಲೇಟ್‌ನಲ್ಲಿ ಇಟ್ಟು ನಿದ್ರೆಗೆ ಜಾರಿದ್ದ ಅಂತ ಗೊತ್ತಾಗಿದೆ. ಇದೀಗ ಆತನನ್ನ ಕೆಲಸದಿಂದ ವಜಾಗೊಳಿಸಲಾಗಿದೆ.

masthmagaa.com

Contact Us for Advertisement

Leave a Reply