ಕೊಲಿಜಿಯಂ ಸಿಸ್ಟಮನ್ನ ಸಧ್ಯದಲ್ಲಿ ಬದಲಾಯಿಸೋದಿಲ್ಲ! ಹೇಳಿದ್ಯಾರು?

masthmagaa.com:

ಉನ್ನತ ಜಡ್ಜ್‌ಗಳ ನೇಮಕಾತಿ ವ್ಯವಸ್ಥೆ ಕೊಲಿಜಿಯಂ ವಿಚಾರವಾಗಿ ಸುಪ್ರೀಂಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ಇನ್ನು ಬಗೆ ಹರಿದಿಲ್ಲ. ಇದ್ರ ನಡುವೆ ರಾಷ್ಟ್ರೀಯ ಕಾನೂನು ನೇಮಕಾತಿಗಳ ಆಯೋಗ (NJAC)ವನ್ನ ಪುನಃ ಜಾರಿಗೆ ತರೋ ಯಾವುದೇ ಪ್ರಸ್ತಾಪ ಸದ್ಯಕ್ಕೆ ನಮ್ಮ ಮುಂದೆ ಇಲ್ಲ ಅಂತ ಕೇಂದ್ರ ಸರ್ಕಾರ ಹೇಳಿದೆ. ಇನ್ನು ಕೊಲಿಜಿಯಂ ಶಿಫಾರಸು ಮಾಡಿರೋ ಸುಪ್ರೀಂಕೋರ್ಟ್‌ ಜಡ್ಜ್‌ ನೇಮಕಾತಿಗೆ ಸಂಬಂಧ ಪಟ್ಟಂತೆ ಒಂದು ಪ್ರಸ್ತಾಪ. ಹಾಗೂ ಹೈಕೋರ್ಟ್‌ ಜಡ್ಜ್‌ಗಳ ನೇಮಕಾತಿಗೆ 8 ಪ್ರಸ್ತಾಪಗಳು ಪೆಂಡಿಂಗ್‌ ಇದೆ ಅಂತ ರಾಜ್ಯ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರದ ಕಾನೂನು ಸಚಿವ ಕಿರಣ್‌ ರಿಜಿಜು ಉತ್ತರಿಸಿದ್ದಾರೆ. ಜೊತೆಗೆ ಹೈಕೋರ್ಟ್‌ ಜಡ್ಜ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ 11 ಪ್ರಪೋಸಲ್ಸ್‌ ಪೆಂಡಿಂಗ್‌ ಇದೆ ಅಂತ ರಿಜಿಜು ಮಾಹಿತಿ ನೀಡಿದ್ದಾರೆ. ಇತ್ತ ಜಡ್ಜ್‌ಗಳ ನೇಮಕಾತಿ ವಿಷಯದಲ್ಲಿ ಕೊಲಿಜಿಯಂನಲ್ಲಿ ನಡೆಸಲಾದ ಚರ್ಚೆ ಬಗ್ಗೆ ರಿವೀಲ್‌ ಮಾಡೋ ಹಾಗಿಲ್ಲ ಅಂತ ಸುಪ್ರೀಂಕೋರ್ಟ್‌ ಹೇಳಿದೆ. 2018ರಲ್ಲಿ ಇಬ್ಬರು ಜಡ್ಜ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯೋಕೆ ಮಹಿಳೆಯೊಬ್ರು ಸಲ್ಲಿಸಿದ ಅರ್ಜಿಯನ್ನ ರಿಜೆಕ್ಟ್‌ ಮಾಡಿದ ಕೋರ್ಟ್‌, ಕೊಲಿಜಿಯಂ ಸಭೆಯಲ್ಲಿ ಚರ್ಚಿಸಲಾದ ವಿಚಾರವನ್ನ ಬಹಿರಂಗ ಮಾಡೋ ಹಾಗಿಲ್ಲ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply