GPS ಸಿಗ್ನಲ್‌ ಕಟ್‌ ಏರ್‌ಲೈನ್ಸ್‌ಗೆ ಎಚ್ಚರಿಕೆ ಕೊಟ್ಟ DGCA!

masthmagaa.com:

ನ್ಯಾವಿಗೇಷನ್‌ ಸಿಸ್ಟಮ್‌ನಲ್ಲಿ ಉಂಟಾದ ಜ್ಯಾಮಿಂಗ್‌ ಹಾಗೂ ಟೆಕ್ನಿಕಲ್‌ ಗ್ಲಿಚ್‌ನಿಂದ ಕಮರ್ಷಿಯಲ್‌ ವಿಮಾನಗಳು GPS ಸಿಗ್ನಲ್‌ ಕಳೆದುಕೊಂಡು ದಾರಿ ತಪ್ತಿರೋ ಕುರಿತು ಸಿವಿಲ್‌ ಏವಿಯೇಶನ್‌ ರೆಗ್ಯುಲೇಟರ್‌ DGCA ಆತಂಕ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ GPS ಸಿಗ್ನಲ್‌ ಕಳೆದುಕೊಂಡು ಅದೆಷ್ಟೋ ವಿಮಾನಗಳು ಮಿಡಲ್‌ ಈಸ್ಟ್‌ನ ಹಲವು ಪ್ರದೇಶಗಳಲ್ಲಿ ಹಾರಾಟ ನಡೆಸಿರೋದು ವರದಿಯಾಗಿದೆ. ಹೀಗಾಗಿ ಭಾರತೀಯ ಏರ್‌ಲೈನ್ಸ್‌ಗಳು ಈ ಬಗ್ಗೆ ಸ್ವಲ್ಪ ಎಚ್ಚೆತ್ಕೊಳ್ಬೇಕು ಅಂತ DGCA ಸುತ್ತೋಲೆ ಹೊರಡಿಸಿದೆ. ಜೊತೆಗೆ ಪ್ರೊಫೆಶನಲ್‌ ಪೈಲಟ್‌ಗಳು, ಫ್ಲೈಟ್‌ ಡಿಸ್ಪ್ಯಾಚರ್ಸ್‌ಗಳು, ಶೆಡ್ಯೂಲರ್ಸ್‌ ಮತ್ತು ಕಂಟ್ರೋಲರ್ಸ್‌ಗಳಿಗೂ ಎಚ್ಚರಿಕೆ ನೀಡಲಾಗಿದೆ. ಈ ರೀತಿ ವಿಮಾನಗಳ ನ್ಯಾವಿಗೇಷನ್‌ ಸಿಸ್ಟಮ್‌ ಜ್ಯಾಮ್‌ ಆಗೋದನ್ನ ತಡೆಯೋದ್ರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಬೇಕು ಅಂತಾನೂ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply