ಸಂದೇಶ್‌ಖಾಲಿ ಕೇಸ್: ಬಂಗಾಳದಲ್ಲಿ ದೀದಿ ವಿರುದ್ದ ಮೋದಿ ವಾಗ್ದಾಳಿ!

masthmagaa.com:

ಸಂದೇಶಖಾಲಿ ಪ್ರಕರಣದ ವಿಚಾರವಾಗಿ ಟಿಎಂಸಿ ಸರ್ಕಾರದ ವಿರುದ್ದ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಮೋದಿ, ಸಂದೇಶಖಾಲಿ ಸಹೋದರಿಯರ ವಿಚಾರವಾಗಿ ಟಿಎಂಸಿ ಸರ್ಕಾರ ಏನು ಮಾಡಿದೆ ಅನ್ನೊದು ಎಲ್ಲರಿಗೂ ಗೊತ್ತಿದೆ. ಈ ಪಕ್ರರಣದ ವಿರುದ್ದ ಇಡೀ ದೇಶವೇ ಆಕ್ರೋಶ ಗೊಂಡಿದೆ. ಸಂದೇಶಖಾಲಿಯ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರ ಸಮಾಜ ಸುಧಾರಕ ರಾಜಾರಾಮ್‌ ಮೋಹನ್‌ ರಾಯ್‌ ಅವ್ರಿಗೆ ಗೊತ್ತಾಗಿದ್ರೆ ಅವ್ರ ಆತ್ಮ ಕೂಡ ಅಳುತಿತ್ತು. ಬಂಗಾಳದ ಮಹಿಳೆಯರ ಘನತೆಗಾಗಿ ಬಿಜೆಪಿ ನಾಯಕರು ಹೋರಾಟ ಮಾಡಿದ್ರ ಫಲವಾಗಿ ಟಿಎಂಸಿ ನಾಯಕ ಶೇಖ್‌ ಶಹಜಾನ್‌ರನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಮೋದಿ, ದೀದಿಗೆ ಮಾತಿನ ಚಾಟಿ ಬೀಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ಮೋದಿ ಸರ್ಕಾರದ ವಿರುದ್ದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರಡ ಗ್ಯಾಸ್‌ ಸಿಲಿಂಡರ್‌ ದರವನ್ನ 2 ಸಾವಿರ ರೂಪಾಯಿಗೆ ಏರಿಕೆ ಮಾಡಲಿದೆ. ಇದ್ರಿಂದಾಗಿ ನಾವು ಹಳೇ ಪದ್ದತಿಯಂತೆ ಕಟ್ಟಿಗೆ ಸಂಗ್ರಹಿಸಿ ಓಲೆ ಹಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ದೇ ಕೇಂದ್ರ ಸರ್ಕಾರ ಏಪ್ರೀಲ್‌ 1ರ ಒಳಗಾಗಿ ಆವಾಸ್‌ ಯೋಜನೆಯ ಫಲಾನುಭವಿಗಳ ಮನೆಗಳನ್ನ ಪೂರ್ಣಗೊಳಿಸಬೇಕು ಅಂತ ಗಡುವು ಬೇರೆ ನೀಡಿದ್ದಾರೆ. ಇಲ್ಲವಾದ್ರೆ ನಮ್ಮ ರಾಜ್ಯ ಸರ್ಕಾರವೇ 11 ಸಾವಿರ ಮನೆಗಳನ್ನ ಫಲಾನುಭವಿಗಳಿಗೆ ನಿರ್ಮಿಸಿ ಕೊಡುತ್ತದೆ. ಹಾಗೂ ಕೇಂದ್ರ ಸರ್ಕಾರ ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಬಾಕಿ ಹಣ ಪಾವತಿಸಿಲ್ಲ. ಅದನ್ನ ನಮ್ಮ ಸರ್ಕಾರವೇ ನೀಡ್ತಿದೆ ಅಂತ ದೀದಿ ಹೇಳಿದ್ದಾರೆ.

-masthmagaac.om

Contact Us for Advertisement

Leave a Reply