ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಧಾನಿ ಮೋದಿ ಭಾಷಣ

masthmagaa.com:

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಾಗರ ಭದ್ರತೆ ಸಂಬಂಧ ನಡೆದ ಓಪನ್ ಡಿಬೇಟ್​​ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ರು. ಸಾಗರ ವ್ಯಾಪಾರದಲ್ಲಿನ ಅಡೆತಡೆಗಳಿಗೆ ಕಡಿವಾಣ ಹಾಕಬೇಕು. ಕಡಲ್ಗಳ್ಳತನ ತಡೆಯಬೇಕು ಅಂದ್ರು. ಅದೇ ರೀತಿ ಸಾಗರದ ವಾತಾವರಣ ಕಾಪಾಡಬೇಕು. ಅಲ್ಲಿ ಪ್ಲಾಸ್ಟಿಕ್ ಎಲ್ಲಾ ಎಸೀಬಾರ್ದು ಅಂತ ಕೂಡ ಕರೆಕೊಟ್ರು. ಈ ರೀತಿ ಡಿಬೇಟ್​​ಗೆ ಅಧ್ಯಕ್ಷತೆ ವಹಿಸಿದ ಮೊದಲ ಪ್ರಧಾನಿ ಮೋದಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಗಸ್ಟ್​ ತಿಂಗಳ ಅವಧಿಗೆ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಹೊಂದಿದೆ. ಶಾಂತಿ ಮತ್ತು ಭಯೋತ್ಪಾದನೆ ನಿಗ್ರಹದ ಸಂಬಂಧ ಭಾರತ ಇನ್ನೂ ಎರಡು ಸಭೆಗಳನ್ನು ನಡೆಸಲಿದೆ.

-masthmagaa.com

Contact Us for Advertisement

Leave a Reply