ಚೀನಿಯರ ಎದುರು ನಿಲ್ಲಲಾಗದ ಪ್ರಧಾನಿ ಮೋದಿ ಒಬ್ಬ ಹೇಡಿ: ರಾಹುಲ್ ಕಿಡಿ

masthmagaa.com:

ಚೀನಿಯರ ವಿರುದ್ಧ ನಿಲ್ಲಲಾಗದ ಪ್ರಧಾನಿ ಮೋದಿ ಒಬ್ಬ ಹೇಡಿ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲಡಾಖ್ ಪೂರ್ವ ಭಾಗದ ಪ್ಯಾಂಗಾಂಗ್​ ಲೇಕ್​ ಬಳಿ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳಲು ಭಾರತ-ಚೀನಾ ಒಪ್ಪಂದಕ್ಕೆ ಬಂದ ಬೆನ್ನಲ್ಲೇ, ಗಡಿಯಲ್ಲಿ ಡಿಸ್​ಎಂಗೇಜ್ಮೆಂಟ್​ ನಡೀತಿರೋವಾಗಲೇ ಮೋದಿ ವಿರುದ್ಧ ರಾಹುಲ್ ಗಾಂಧಿ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಚೀನಿಯರ ವಿರುದ್ಧ ನಿಲ್ಲಲು ಸಾಧ್ಯವಾಗದ ಪ್ರಧಾನಿ ಒಬ್ಬ ಹೇಡಿ. ನಮ್ಮ ಸೇನೆಯ ತ್ಯಾಗಕ್ಕೆ ಅವರು ಅವಮಾನ ಮಾಡಿದ್ದಾರೆ, ದ್ರೋಹ ಬಗೆದಿದ್ದಾರೆ. ನಮ್ಮ ರಕ್ಷಣಾ ಸಚಿವರು ಚೀನಿಯರು ಎಂಟ್ರಿಕೊಟ್ಟ ಡೆಪ್ಸಾಂಗ್ ಪ್ರದೇಶದ ಬಗ್ಗೆ ಒಂದು ಮಾತೂ ಆಡಿಲ್ಲ. ನಿಜ ಏನಂದ್ರೆ ಪ್ರಧಾನಿ ಮೋದಿ ಭಾರತದ ಭೂಪ್ರದೇಶವನ್ನ ಚೀನಾಗೆ ಬಿಟ್ಟುಕೊಟ್ಟಿದ್ದಾರೆ. ಇದರ ಬಗ್ಗೆ ಪ್ರಧಾನಿ ದೇಶಕ್ಕೆ ಉತ್ತರ ಕೊಡಬೇಕು’ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply