ಅರುಣಾಚಲ ಪ್ರದೇಶ ಸದಾ ನಮ್ಮದೆಂದ ಮೋದಿ! ಚೀನಾಗೆ ತಿರುಗೇಟ!

masthmagaa.com:

ಭಾರತದ ಅರುಣಾಚಲ ಪ್ರದೇಶ ತಮ್ಮದಂತ ಹೇಳಿ ಅಲ್ಲಿನ ಪ್ರದೇಶಗಳಿಗೆ ನಾಮಕರಣ ಮಾಡಿದ ಚೀನಾಗೆ ಈಗ ಪ್ರಧಾನಿ ನರೇಂದ್ರ ಮೋದಿಯವ್ರು ತಿರುಗೇಟು ನೀಡಿದ್ದಾರೆ. ʻಅರುಣಾಚಲ ಪ್ರದೇಶ ಯಾವತ್ತಿದ್ರೂ, ಭಾರತದ ಅವಿಭಜಿತ ಅಂಗವಾಗಿ ಉಳಿಯಲಿದೆʼ ಅಂತ ಹೇಳಿದ್ದಾರೆ. ಜೊತೆಗೆ ಅಲ್ಲಿ ಹೊಸತಾಗಿ ನಿರ್ಮಾಣ ಮಾಡಲಾಗಿರೋ ಸೆಲಾ ಟನೆಲ್‌ನ ಬಗ್ಗೆ ಮಾತಾಡಿದ್ದು, ʻಈ ಟನೆಲ್‌ನಿಂದಾಗಿ ಸೇನಾ ಪಡೆಗಳು ಮತ್ತು ಅಗತ್ಯ ವಸ್ತುಗಳನ್ನ ಬಹಳ ವೇಗವಾಗಿ ಅರುಣಾಚಲ ಪ್ರದೇಶಕ್ಕೆ ತಲುಪಿಸೋಕೆ ಸಾಧ್ಯವಿದೆ. ಇದು ಆ ಪ್ರದೇಶದಲ್ಲಿ ಗೇಮ್‌ ಚೇಂಜರ್‌ ಆಗಿ ಕೆಲಸ ಮಾಡಲಿದೆ. ಅಲ್ಲಿನ ತವಾಂಗ್‌ ಭಾಗಕ್ಕೆ ಎಲ್ಲಾ ಹವಾಮಾನದಲ್ಲೂ ಸಂಪರ್ಕ ಒದಗಿಸುತ್ತೆʼ ಅಂತೇಳಿದ್ದಾರೆ..ಜೊತೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಮಾತನಾಡಿ… ತಮ್ಮ ಸರ್ಕಾರದ ವಿರುದ್ಧ ಮಾಡಲಾಗಿರೋ ಟೀಕೆಗಳನ್ನ ತಳ್ಳಿಹಾಕಿದ್ದಾರೆ. ʻಈ ಸಂಘರ್ಷವನ್ನ ಬಗೆಹರಿಸಲು, ನಾವು ತುಂಬಾ ಎಫರ್ಟ್‌ ಹಾಕಿದ್ದೇವೆ. ಸರಿಯಾದ ಸಮಯಕ್ಕೆ ಸರ್ಕಾರದ ಮಧ್ಯಸ್ಥಿಕೆಯಿಂದ ಮತ್ತು ಮಣಿಪುರ ಸರ್ಕಾರದ ಶ್ರಮದಿಂದ ಅಲ್ಲಿನ ಪರಿಸ್ಥಿತಿ ಸುಧಾರಣೆಯಾಗಿದೆ. ಈ ಸಂಘರ್ಷ ಪೀಕ್‌ನಲ್ಲಿರೋವಾಗ.. ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವ್ರು ಮಣಿಪುರದಲ್ಲೇ ಉಳಿದುಕೊಂಡಿದ್ರು. ಸಂಘರ್ಷವನ್ನ ನಿಲ್ಲಿಸೋಕೆ ಹಲವಾರು ಮಧ್ಯಸ್ಥಗಾರರೊಂದಿಗೆ 15ಕ್ಕೂ ಹೆಚ್ಚು ಮೀಟಿಂಗ್‌ಗಳನ್ನ ನಡೆಸಿದ್ರುʼ ಅಂತೇಳಿದ್ದಾರೆ. ಇನ್ನು ಗಡಿ ಭದ್ರತೆ ಬಗ್ಗೆ ಪುನರುಚ್ಚರಿಸಿದ ಮೋದಿಯವ್ರು, ಮಯನ್ಮಾರ್‌ನಿಂದ ಬರೋ ಅಕ್ರಮ ವಲಸಿಗರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆನೂ ಹೈಲೈಟ್‌ ಮಾಡಿದ್ದಾರೆ. ಭಾರತ ಮತ್ತು ಮಯನ್ಮಾರ್‌ ನಡುವೆ ಇದ್ದ ಮುಕ್ತ ಸಂಚಾರ ಆಡಳಿತ ವ್ಯವಸ್ಥೆಯನ್ನ ರದ್ದುಗೊಳಿಸಿರೋದನ್ನ ಉಲ್ಲೇಖಿಸಿದ್ದಾರೆ.

-masthmagaa.com

Contact Us for Advertisement

Leave a Reply