ಫ್ರಾನ್ಸ್‌ ಹಾಗೂ ಯುಎಇ ಪ್ರವಾಸ ಕೈಗೊಂಡ PM ಮೋದಿ!

masthmagaa.com:

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇಂದಿನಿಂದ 2 ದಿನಗಳ ಕಾಲ ತಮ್ಮ ಫ್ರಾನ್ಸ್‌ ಭೇಟಿಯಲ್ಲಿ ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜುಲೈ 14 ಅಂದ್ರೆ ನಾಳೆ ನಡೆಯಲಿರೋ ಫ್ರಾನ್ಸ್‌ ವಾರ್ಷಿಕ ʻಬಾಸ್ಟಿಲ್‌ ಡೇʼ ಪರೇಡ್‌ನಲ್ಲಿ ಮೋದಿಯವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಭಾರತೀಯ ನೇವಿ, ಭೂಸೇನೆ ಹಾಗೂ ಏರ್‌ಫೋರ್ಸ್ ಸೇರಿದಂತೆ ಮೂರು ಸೇನೆಗಳ 269 ಸದಸ್ಯರ ಸೇನಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಲಿದೆ. ಇದೇ ವೇಳೆ ಫ್ರಾನ್ಸ್‌ನ ಜೆಟ್‌ಗಳ ಜೊತೆಯಲ್ಲಿ ಭಾರತದ ವಾಯುಪಡೆಯ 3 ರಫೇಲ್‌ ಫೈಟರ್‌ ಜೆಟ್‌ಗಳು ಕೂಡ ಪಾಲ್ಗೊ‍ಳ್ಳಲಿವೆ. ಅಲ್ದೆ 26 ರಫೇಲ್‌ ಜೆಟ್‌ಗಳ ಖರೀದಿಗೆ ಸಂಬಂಧಿಸಿದ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಲಿದ್ದಾರೆ ಅಂತ ನಿರೀಕ್ಷಿಸಲಾಗಿದೆ. ಇನ್ನು ಫ್ರಾನ್ಸ್‌ ಪ್ರವಾಸದ ಬಳಿಕ UAEಗೆ ಭೇಟಿ ನೀಡುವ ಕುರಿತು ಮೋದಿ ಟ್ವೀಟ್‌ ಮಾಡಿದ್ದು, ಜುಲೈ 15 ರಂದು UAE ಅಧ್ಯಕ್ಷ ಎಚ್‌.ಎಚ್‌ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇನೆ ಅಂತ ತಿಳಿಸಿದ್ದಾರೆ.

Contact Us for Advertisement

Leave a Reply