ಪ್ರತಿಪಕ್ಷಗಳ I.N.D.I.A ಒಕ್ಕೂಟಕ್ಕೆ ಮೋದಿ ಕೊಟ್ಟ ಹೆಸರೇನು ಗೊತ್ತಾ?

masthmagaa.com:

ಪ್ರತಿಪಕ್ಷಗಳ I.N.D.I.A ಒಕ್ಕೂಟವನ್ನ ಈಸ್ಟ್‌ ಇಂಡಿಯಾ ಕಂಪನಿ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಹೋಲಿಕೆ ಮಾಡಿದ್ದ ಪ್ರಧಾನಿ ಮೋದಿಯವರು ಈಗ ಮತ್ತೆ ಟೀಕಿಸಿದ್ದಾರೆ. ಬಿಹಾರದ NDA ಮೈತ್ರಿಕೂಟದ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿರುವ ಮೋದಿ, ಪ್ರತಿಪಕ್ಷಗಳ ಮೈತ್ರಿಯನ್ನ I.N.D.I.A ಅನ್ನೊ ಹೆಸರಿನಿಂದ ಕರೆಯಬೇಡಿ. ಬದಲಾಗಿ ‘ಘಮಂಡಿಯಾ’ ಅಂದ್ರೆ ದುರಹಂಕಾರಿ ಅಂತ ಕರೆಯಿರಿ ಎಂದಿದ್ದಾರೆ. ಜೊತೆಗೆ ಪ್ರತಿಪಕ್ಷಗಳು ತಮ್ಮ ಒಕ್ಕೂಟದ ಹೆಸರನ್ನು I.N.D.I.A ಅಂತ ಕರೆದುಕೊಳ್ಳುತ್ತಿರೋದು ದೇಶಪ್ರೇಮದಿಂದ ಅಲ್ಲ. ಈ ಒಕ್ಕೂಟ ದೇಶ ದೋಚುವ ದುರುದ್ದೇಶ ಹೊಂದಿವೆ ಅಂತ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇತ್ತ ಮೋದಿ ಘಮಂಡಿಯಾ ಅನ್ನೊ ಪದ ಬಳಸಿರೋದಕ್ಕೆ ಕಾಂಗ್ರೆಸ್ ಸೇರಿ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಮತ್ತೊಂದ್‌ ಕಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅನ್ನ ಸೋಲಿಸೋಕೆ ರಣತಂತ್ರ ರೂಪಿಸುತ್ತಿರೋ ವಿಪಕ್ಷಗಳ ಒಕ್ಕೂಟ I.N.D.I.A ತಮ್ಮ ಮುಂದಿನ ಸಭೆಯನ್ನ ಮಹಾರಾಷ್ಟ್ರದಲ್ಲಿ ನಡೆಸಲಿದೆ ಅಂತ ತಿಳಿದು ಬಂದಿದೆ. ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1 ರಂದು ಮುಂಬೈನಲ್ಲಿ ಸಭೆ ನಡೆಸುವ ಸಾಧ್ಯತೆಯಿದೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply