ನೆಹರು ಹುಟ್ಟುಹಬ್ಬ: ಗಣ್ಯರಿಂದ ಗೌರವ ಸಮರ್ಪಣೆ

masthmagaa.com:

ದೇಶದ ಮೊದಲ ಪ್ರಧಾನಿ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಪಂಡಿತ್‌ ಜವಾಹರ್‌ ಲಾಲ್‌ ನೆಹರು ಹುಟ್ಟುಹಬ್ಬದ ದಿನ, ಇಂದು ಮಕ್ಕಳ ದಿನಾಚರಣೆಯನ್ನು ದೇಶಾಧ್ಯಂತ ಆಚರಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ನೆಹರುರಿಗೆ ಗೌರವ ಸಮರ್ಪಿಸಿದ್ದಾರೆ. ಪ್ರಧಾನಿ ಮೋದಿ Xನಲ್ಲಿ ʻನಮ್ಮ ಮೊದಲ ಪ್ರಧಾನ ಮಂತ್ರಿ ಜವಹರ್‌ಲಾಲ್‌ ನೆಹರು ಅವರಿಗೆ ಶ್ರದ್ಧಾಂಜಲಿʼ ಅಂತ ಪೋಸ್ಟ್‌ ಹಾಕಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ದೆಹಲಿಯಲ್ಲಿರುವ ನೆಹರು ಅವರ ಸಮಾಧಿ ಸ್ಥಳ ಶಾಂತಿವನಕ್ಕೆ ತೆರಳಿ ಪುಷ್ಪಾರ್ಚನೆ ಮಾಡಿದ್ದಾರೆ. “ನೆಹರು ನಮ್ಮ ದೇಶವನ್ನ ಸೊನ್ನೆಯಿಂದ ಪರ್ವತದ ಎತ್ತರಕ್ಕೆ ತಗೊಂಡೋದ್ರು. ಆಧುನಿಕ ಭಾರತದ ಪಿತಾಮಹ, ಪ್ರಜಾಪ್ರಭುತ್ವದ ರಕ್ಷಕ. ದೇಶನ ಜನರನ್ನ ಎಲ್ಲಾ ಸಂದರ್ಭದಲ್ಲಿ ಒಂದಾಗಿ ಇರುವಂತೆ ಪ್ರೇರೇಪಿಸಿದ್ರು. ಅವರಿಗೆ ಶ್ರದ್ಧಾಂಜಲಿ” ಅಂತ ಖರ್ಗೆ Xನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್‌ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನೆಹರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ವೇಳೆ ಮಾತಾಡಿರುವ ಶಿವಕುಮಾರ್‌, ನೆಹರು ಅವರ ಗಾಂಧಿ ಕುಟುಂಬ ಇರ್ಬಾರ್ದು ಅಂತ ಬಿಜೆಪಿ BJP ಏನೇನೋ ಮಾಡಲು ಹೊರಟಿದೆ. ಆದ್ರೆ ಅದಕ್ಕೆ ನಾವು ಅವಕಾಶ ಕೊಡೋದಿಲ್ಲ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply