ಇಂದು 76ನೇ ಸೇನಾ ದಿನಾಚರಣೆ: ಪ್ರಧಾನಿ ಮೋದಿ ಹೇಳಿದ್ದೇನು?

masthmagaa.com:

ಇಂದು ಜನವರಿ 15, 76ನೇ ಸೇನಾ ದಿನಾಚರಣೆ. 1949ರಲ್ಲಿ ಇದೇ ದಿನ ಜನರಲ್‌ ಕೆಎಮ್‌ ಕಾರಿಯಪ್ಪ ದೇಶದ ಮೊದಲ ಕಮ್ಯಾಂಡರ್‌ ಇನ್‌ ಚೀಫ್‌ ಆಗಿ ಅಧಿಕಾರ ಸ್ವೀಕರಿಸಿದ್ರು. ಆ ಮೂಲಕ ಆರ್ಮಿ ಅಧಿಕಾರ ಬ್ರಿಟಿಷರಿಂದ ಭಾರತೀಯರಿಗೆ ಬಂದ ದಿನ ಇವತ್ತು. ಈ ಪ್ರಯುಕ್ತ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು, ಸೈನಿಕರ ತ್ಯಾಗ, ಬಲಿದಾನಗಳನ್ನ ಶ್ಲಾಘಿಸಿದ್ದಾರೆ. ನಮ್ಮ ದೇಶವನ್ನ ರಕ್ಷಿಸಿ, ಸಾರ್ವಭೌಮತೆಯನ್ನ ಕಾಪಾಡುವಲ್ಲಿ ಸೈನಿಕರು ನಿರಂತರ ಶೌರ್ಯ, ಸಮರ್ಪಣೆಯನ್ನ ತೋರಿಸಿದ್ದಾರೆ ಅಂತ ಪಿಎಂ ಮೋದಿ ಪೋಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply