ಪುಟಿನ್‌, ಝೆಲೆನ್ಸ್ಕಿಗೆ ಮೋದಿ ಕರೆ! ರಷ್ಯಾ-ಯುಕ್ರೇನ್‌ನಿಂದ ಆಹ್ವಾನ!

masthmagaa.com:

ಯುದ್ಧನಿರತ ರಷ್ಯಾ ಮತ್ತು ಯುಕ್ರೇನ್‌ ಅಧ್ಯಕ್ಷರಿಗೆ ಪ್ರಧಾನಿ ಮೋದಿಯವ್ರು ಕರೆ ಮಾಡಿ ಮಾತುಕತೆ ನಡೆಸಿದ್ರು. ಈ ವೇಳೆ ರಷ್ಯಾಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಪ್ರಧಾನಿ ಮೋದಿಯವ್ರನ್ನ ಇನ್ವೈಟ್‌ ಮಾಡಿದ್ದಾರೆ ಅಂತ ಮೂಲಗಳು ತಿಳಿಸಿವೆ. ಮಾರ್ಚ್‌ 20ರಂದು ತಮ್ಮ `X’ ಖಾತೆಯಲ್ಲಿ ಪೊಸ್ಟ್‌ ಒಂದನ್ನ ಮಾಡಿರೋ ಮೋದಿಯವ್ರು, ರಷ್ಯಾಧ್ಯಕ್ಷ ಪುಟಿನ್‌ ಅವ್ರೊಂದಿಗೆ ಮಾತನಾಡಿರೋದನ್ನ ಹೇಳಿಕೊಂಡಿದ್ರು. ʻರಷ್ಯಾ ಮತ್ತು ಭಾರತದ ಅತ್ಯಂತ ವಿಶೇಷವಾದ ಸ್ಟಾಟಜಿಕ್‌ ಪಾರ್ಟ್‌ನರ್‌ಶಿಪ್‌ನ್ನ ಇನ್ನಷ್ಟು ಆಳವಾಗಿಸೋಕೆ…ವಿಸ್ತರಿಸಲು ಒಟ್ಟಿಗೆ ಕೆಲಸ ಮಾಡೋಕೆ ಒಪ್ಕೊಂಡಿದ್ದೇವೆʼ ಅಂತ ಹೇಳಿದ್ರು. ಇದಾದ ಸ್ವಲ್ಪ ಹೊತ್ತಲ್ಲೇ ಮೋದಿಯವ್ರು `X’ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿದ್ರು. ಇದ್ರಲ್ಲಿ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಅವ್ರೊಂದಿಗೆ ಭಾರತ ಮತ್ತು ಯುಕ್ರೇನ್‌ ಪಾರ್ಟನರ್‌ಶಿಪ್‌ ಇನ್ನಷ್ಟು ಬಲಪಡಿಸೋ ಬಗ್ಗೆ ಮಾತುಕತೆ ನಡೆಸಿರೋದಾಗಿ ಹೇಳ್ಕೊಂಡಿದ್ರು..ಈ ವೇಳೆ ಎರಡು ದೇಶದ ನಾಯಕರು ಪ್ರಧಾನಿ ಮೋದಿಯವರನ್ನ ತಮ್ಮ ದೇಶಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply