ಭಾರತ-ಸೌದಿ ಪ್ಯೂಚರ್ ಬಾಂಡಿಂಗ್‌ ಬಗ್ಗೆ ಮೋದಿ & ಸೌದಿ ಪ್ರಿನ್ಸ್ ಟಾಕ್!

masthmagaa.com:

ಭಾರತ-ಸೌದಿ ಅರೇಬಿಯಾ ನಡುವಿನ ಭವಿಷ್ಯದ ಕಾರ್ಯತಂತ್ರಗಳ ಕುರಿತು ನನ್ನ ಬ್ರದರ್ ಸೌದಿ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಜೊತೆ ಫೋನ್ ಕರೆಯಲ್ಲಿ ಉತ್ತಮ ಸಂವಾದ ನಡೆಸಲಾಗಿದೆ ಅಂತ ಪ್ರಧಾನಿ ಮೋದಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಹಿಂಸಾಚಾರ, ಉಗ್ರವಾದ ಮತ್ತು ನಾಗರಿಕರ ಹತ್ಯೆ ಬಗ್ಗೆ ಡಿಸ್ಕಸ್ ಮಾಡಲಾಗಿದೆ. ಅಲ್ಲಿ ಸ್ಥಿರ ಶಾಂತಿ, ಭದ್ರತೆ ನೆಲೆಸಲು ನಾವು ಒಟ್ಟಾಗಿ ಕೆಲ್ಸ ಮಾಡಲು ನಾವಿಬ್ಬರು ಸಮ್ಮತಿಸಿದ್ದೇವೆ ಅಂತ ಮೋದಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಇಸ್ರೇಲ್‌-ಹಮಾಸ್‌ ಯುದ್ದದ ವಿಚಾರವಾಗಿ ಭಾರತದ ಧೀರ್ಘಕಾಲದ ನಿಲುವನ್ನ ಪುನರುಚ್ಚರಿಸಿದ ಪ್ರಧಾನಿ ಮೋದಿ, ಸಂತ್ರಸ್ಥರಿಗೆ ಮಾನವೀಯ ನೆರವು ನೀಡೋದನ್ನ ಮುಂದುರೆಸೋ ಬಗ್ಗೆ ಮಾತನಾಡಿದ್ದಾರೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಸಪ್ಟೆಂಬರ್‌ನಲ್ಲಿ ಭಾರತ-ಸೌದಿ ಅರೇಬಿಯಾ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತು ಸೌದಿ ಪ್ರಿನ್ಸ್ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತ ಪ್ರವಾಸ ಕೈಗೊಂಡಿದ್ದರು. ಸೋ ಆ ಭೇಟಿಯಲ್ಲಿನ ಒಪ್ಪಂದದ ಯೋಜನೆಗಳ ಸ್ಥಿತಿ ಗತಿ ಕುರಿತು ಉಭಯ ನಾಯಕರು ಡಿಸ್ಕಸ್‌ ಮಾಡಿದ್ದಾರೆ ಅಂತ ವರದಿಯಾಗಿದೆ. ಇನ್ನು ಸೌದಿ ಅರೇಬಿಯಾದಲ್ಲಿ ನಡಿಯೋ ವರ್ಲ್ಡ್‌ ಬುಸಿನೆಸ್ ಎಕ್ಸ್ಪೋ 2030 ಹಾಗೂ 2034ರ ಫಿಫಾ ವಿಶ್ವಕಪ್‌ ಪುಟ್ಬಾಲ್‌ ಆಯೋಜನೆಗೆ ಪಿಎಂ ಮೋದಿ ಶುಭ ಹಾರೈಸಿದ್ದಾರೆ. ಭವಿಷ್ಯದಲ್ಲಿಯೂ ಉಭಯ ದೇಶಗಳ ಸಹಕಾರವನ್ನ ಸ್ಟ್ರಾಂಗ್‌ ಮಾಡೋದಕ್ಕೆ ಉಭಯ ನಾಯಕರು ಸದಾ ಸಂಪರ್ಕದಲ್ಲಿರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಇಸ್ರೇಲ್‌ ಹಡಗುಗಳ ಮೇಲೆ ಇರಾನ್‌ ಬೆಂಬಲಿತ ಹೌತಿ ಉಗ್ರರಿಂದ ದಾಳಿಯಾದ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮೋದಿ ಇತ್ತೀಚಿಗಷ್ಟೇ ಚರ್ಚೆ ಮಾಡಿದ್ರು. ಇದೀಗ ಸೌದಿ ಪ್ರಿನ್ಸ್ ಜೊತೆಗೂ ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಡಿಸ್ಕಸ್‌ ಮಾಡಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply