ಮಧ್ಯಪ್ರದೇಶಕ್ಕೆ ಮೋದಿ: 24 ಕೋಚಿ ಖರ್ಚಿಗೆ ಮುಂದಾದ ಸರ್ಕಾರ!

masthmagaa.com:

ಮಧ್ಯಪ್ರದೇಶ ಸರ್ಕಾರ ಭಗವಾನ್ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ನವೆಂಬರ್ 15ರಂದು ಜನ್​ಜಾತೀಯ ಗೌರವ್ ದಿವಸ್​​​​​​​​ ಆಚರಿಸಲು ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಮಧ್ಯಪ್ರದೇಶದ ರಾಜಧಾನಿ ಬೋಪಾಲ್​​ನಲ್ಲಿ ಕೇವಲ 4 ಗಂಟೆ ಇರಲಿದ್ದು, ಅದ್ರಲ್ಲೂ ಸ್ಟೇಜ್ ಮೇಲೆ 1 ಗಂಟೆ 15 ನಿಮಿಷ ಕಳೆಯಲಿದ್ದಾರೆ. ಆದ್ರೆ ಈ ಕಾರ್ಯಕ್ರಮಕ್ಕೆ ಮಧ್ಯಪ್ರದೇಶ ಸರ್ಕಾರ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗಿದೆ. ಇದ್ರಲ್ಲಿ ಕಾರ್ಯಕ್ರಮ ನಡೆಯಲಿರುವ ಜಂಬೋರಿ ಮೈದಾನಕ್ಕೆ ಜನರನ್ನು ಸಾಗಿಸೋದಕ್ಕೇನೇ 13 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ. ಸ್ಟೇಜ್​, ಟೆಂಟ್​, ಡೆಕೋರೇಷನ್​ ಮತ್ತು ಪಬ್ಲಿಸಿಟಿಗೆ 9 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ. ಈ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ದೇಶದ ಮೊದಲ ಖಾಸಗಿ ಮತ್ತು ಸಾರ್ವಜನಿಕ ವಲಯದ ಸಹಭಾಗಿತ್ವದಲ್ಲಿ ನಿರ್ಮಾಣವಾದ ದೇಶದ ಮೊದಲ ರೈಲ್ವೆ ಸ್ಟೇಷನ್ ಆಗಿರೋ ಹಬಿಬ್​ಗಂಜ್​ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಂದಹಾಗೆ ಮಧ್ಯಪ್ರದೇಶದಲ್ಲಿ ಪರಿಶಿಷ್ಠ ಬುಡಕಟ್ಟು ಜನಾಂಗದವರಿಗೆ 47 ವಿಧಾನಸಭೆ ಕ್ಷೇತ್ರಗಳು ಮೀಸಲಿವೆ. ಈ ಪೈಕಿ 2013ರಲ್ಲಿ 31ರಲ್ಲಿ ಗೆದ್ದಿದ್ದ ಬಿಜೆಪಿ, 2018ರಲ್ಲಿ ಕೇವಲ 16 ಸ್ಥಾನ ಗೆದ್ದಿತ್ತು. ಇವೆಲ್ಲದ್ರ ನಡುವೆ ಹಬೀಬ್​ಗಂಜ್​ ರೈಲ್ವೆ ಸ್ಟೇಷನ್​​ಗೆ ಬೋಪಾಲ್​​ನ ಬುಡಕಟ್ಟು ಜನಾಂಗದ ಕೊನೆಯ ರಾಣಿ ಕಮ್ಲಾಪತಿ ಹೆಸರಿಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶ ಸರ್ಕಾರ ಪತ್ರ ಬರೆದಿದೆ.

-masthmagaa.com

Contact Us for Advertisement

Leave a Reply