ತಮಿಳುನಾಡಿನತ್ತ ಪ್ರಧಾನಿ ಪ್ರವಾಸ: 20000 ಕೋಟಿ ರೂ. ಯೋಜನೆಗೆ ಚಾಲನೆ!

masthmagaa.com:

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಹೊಸ ಸ್ಲೋಗನ್‌ ರಿಲೀಸ್‌ ಮಾಡಿದೆ. “ತೀಸ್ರೀ ಬಾರ್‌ ಮೋದಿ ಸರ್ಕಾರ್‌; ಅಬ್‌ಕೀ ಬಾರ್‌ 400 ಪಾರ್” ಅಂದ್ರೆ ಮೂರನೇ ಬಾರಿಗೆ ಮೋದಿ ಸರ್ಕಾರ ಬರಲಿದೆ, ಈ ಬಾರಿ 400ಕ್ಕೂ ಹೆಚ್ಚು ಸೀಟ್‌ ಗೆಲ್ಲಲಿದೆ ಅನ್ನೋ ಘೋಷವನ್ನ ಬಿಜೆಪಿ ಇನ್ಸ್ಟಾಲ್‌ ಮಾಡಕೊಂಡಿದೆ.‌ ಅಂದ್ಹಾಗೆ ಕಳೆದ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನಕ್ಕೆ ಪಿಎಂ ಮೋದಿ ಬಂದಾಗ್ಲೆ ಈ ಲೋಕಸಭೆಯಲ್ಲಿ ಈ ಘೋಷಣೆ ಕೂಗಲಾಗಿತ್ತು. ಇದೀಗ ಈ ಘೋಷಣೆಯನ್ನೇ ಬರುವ ಚುನಾವಣೆಯ ಅಫಿಶಿಯಲ್‌ ಘೋಷಣೆ ಅಂತ ಅನೌನ್ಸ್‌ ಮಾಡಲಾಗಿದೆ. ಅಲ್ಲದೆ ಜನವರಿ 25ರಿಂದ ಮಾರ್ಚ್‌ 25ರ ವರೆಗೆ ಕಂಪ್ಲೀಟ್‌ ಎರಡು ತಿಂಗಳ ಕ್ಯಾಂಪೇನ್‌ ಪ್ಲಾನನ್ನ ಬಿಜೆಪಿ ರೆಡಿ ಮಾಡ್ಕೊಂಡಿದೆ. ರಾಮಮಂದಿರ ಗ್ಯಾರಂಟಿಯನ್ನ ಪೂರೈಸಿರೋ ವಿಷಯವನ್ನ ಮುಂದಿಟ್ಕೊಂಡು ಬಿಜೆಪಿ ಆಖಾಡಕ್ಕೆ ಇಳಿಯುತ್ತೆ ಎನ್ನಲಾಗ್ತಿದೆ. ಇದೇ ವಿಚಾರವಾಗಿ ಸುಮಾರು 2.5 ಕೋಟಿ ಜನರಿಗೆ ಏಪ್ರಿಲ್‌ ಒಳಗೆ ರಾಮಮಂದಿರ ದರ್ಶನ ಮಾಡಿಸೋ ಪ್ಲಾನನ್ನೂ ಬಿಜೆಪಿ ಹೊಂದಿದೆ ಅಂತ ಹೇಳಲಾಗ್ತಿದೆ. ಇದೇ ಕಾರಣಕ್ಕೆ ವಿಶ್ವ ಹಿಂದೂ ಪರಿಷತ್‌ ಮತ್ತು RSSನ ʻಅಕ್ಷತ ಆಹ್ವಾನ ಕಾರ್ಯಕ್ರಮʼದಡಿ 10 ಕೋಟಿ ಜನರೊಂದಿಗೆ ನೇರವಾಗಿ ಕಮ್ಯುನಿಕೇಟ್‌ ಮಾಡೋಕೆ ಬಿಜೆಪಿ ಯೋಜಿಸ್ಕೊಂಡಿದೆ ಅಂತೇಳಲಾಗ್ತಿದೆ. ಇತ್ತ ಹೊಸ ವರ್ಷದ ಅಭಿವೃದ್ಧಿ ಕೆಲಸಗಳನ್ನ ಕಿಕ್‌ ಸ್ಟಾರ್ಟ್‌ ಮಾಡೋಕೆ ಪ್ರಧಾನಿ ಮೋದಿ ದಕ್ಷಿಣ ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪಗಳಿಗೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಮಂಗಳವಾರ ತಮಿಳುನಾಡಿನ ತಿರುಚಿನಾಂಪಲ್ಲಿ ಅಂದ್ರೆ ತ್ರಿಚಿಯಲ್ಲಿ ಸಿಎಂ ಎಂಕೆ ಸ್ಟಾಲಿನ್‌ ಪ್ರಧಾನಿ ಮೋದಿ ಅವ್ರನ್ನ ವೆಲ್‌ಕಮ್‌ ಮಾಡಿಕೊಂಡಿದ್ದಾರೆ. ನಂತರ ತ್ರಿಚಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನ್ನ ಪ್ರಧಾನಿ ಉದ್ಘಾಟಿಸಿದ್ದಾರೆ. ಅಲ್ಲದೆ ಒಟ್ಟು 20 ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ತಮಿಳುನಾಡಿನಲ್ಲಿ ಪೂರ್ಣಗೊಂಡಿರುವ ಹಾಗೂ ಶುರು ಆಗಲಿರೋ ಹೊಸ ಯೋಜನೆಗಳಿಗೆ ಪಿಎಂ ಮೋದಿ ಮಂಗಳವಾರ ಚಾಲನೆ ನೀಡಿದ್ದಾರೆ. ಇನ್ನು ತ್ರಿಚಿಯಲ್ಲಿ ಮಾತನಾಡಿದ ಮೋದಿ, ʻಇತ್ತೀಚಿಗೆ ಉಂಟಾದ ಮಳೆ ಮತ್ತು ಪ್ರವಾಹದಲ್ಲಿ ಹಾನಿಯಾದ ಸಂತ್ರಸ್ತ ಕುಟುಂಬಗಳ ಸ್ಥಿತಿ ನೋಡಿ ನಾನು ತುಂಬಾ ಭಾವುಕನಾದೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಜನರೊಂದಿಗೆ ನಿಂತಿದೆ. ನಾವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಪೋರ್ಟ್‌ ಮಾಡ್ತೀವಿ ಅಂತ ಹೇಳಿದ್ದಾರೆ. ಇದೇ ವೇಳೆ ಇತ್ತೀಚೆಗೆ ನಿಧನರಾದ ತಮಿಳುನಾಡಿನ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಮತ್ತು ಡಿಎಂಡಿಕೆ ನಾಯಕ, ನಟ ವಿಜಯಕಾಂತ್‌ರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ನಂತ್ರ ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವದಲ್ಲಿ ಭಾಗಿಯಾದ ಮೋದಿ ಮುಖ್ಯ 2024ರ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದೆ ಅಂತ ಹರ್ಷ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧಿಯಾ, ತಮಿಳುನಾಡು ಸಿಎಂ MK ಸ್ಟಾಲೀನ್‌ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ರು.

-masthmagaa.com

Contact Us for Advertisement

Leave a Reply