ಒಡಿಶಾ ಐಟಿ ದಾಳಿ: ಪಿಎಂ ಮೋದಿ `X’ನಲ್ಲಿ ವಿಡಿಯೋ ಶೇರ್‌!

masthmagaa.com:

ಕಾಂಗ್ರೆಸ್‌ ಸಂಸದ ಧೀರಜ್‌ ಕುಮಾರ್‌ ಅವ್ರಿಗೆ ಸಂಬಂಧಿಸಿದ ಐಟಿ ದಾಳಿ ಕುರಿತು ಇದೀಗ ಪ್ರಧಾನಿ ನರೇಂದ್ರ ಮೋದಿ ಬಹಳ ಡಿಫರೆಂಟ್‌ ಆಗಿ ಟೀಕೆ ಮಾಡಿದ್ದಾರೆ. ತಮ್ಮ `X’ ಖಾತೆಯಲ್ಲಿ ಎಡಿಟ್‌ ಮಾಡಿರೋ ಶಾರ್ಟ್‌ ವಿಡಿಯೋ ಒಂದನ್ನ ಶೇರ್‌ ಮಾಡಿದ್ದಾರೆ. ಸ್ಪ್ಯಾನಿಷ್‌ನ ಅತ್ಯಂತ ಫೇಮಸ್‌ ಆಗಿರೋ ʻಮನಿ ಹೀಸ್ಟ್‌ʼ (Money Heist) ಅನ್ನೋ ಸಿರೀಸ್‌ ಆಧಾರದ ಮೇಲೆ ಈ ವಿಡಿಯೋವನ್ನ ಎಡಿಟ್‌ ಮಾಡಲಾಗಿದೆ. ಈ ವಿಡಿಯೋ ಶೇರ್‌ ಮಾಡಿದ ಮೋದಿ, ʻಭಾರತದಲ್ಲಿ ಕಾಂಗ್ರೆಸ್‌ ಪಕ್ಷ ಇರೋವಾಗ ʻಮನಿ ಹೀಸ್ಟ್‌ʼ ಫಿಕ್ಷನ್‌ ಯಾರಿಗೆ ತಾನೇ ಬೇಕು. ಕಾಂಗ್ರೆಸ್‌ ಕಳೆದ 70 ವರ್ಷಗಳಿಂದ ಮಾಡಿರೋ ದರೋಡೆ ಲೆಜೆಂಡರಿಯಾಗಿದೆ. ಇನ್ನೂ ಕೂಡ ಕಂಟಿನ್ಯೂ ಮಾಡ್ತಿದೆʼ ಅಂತ ಟೀಕೆ ಮಾಡಿದ್ದಾರೆ. ಇನ್ನೊಂದ್ಕಡೆ ಕಾಂಗ್ರೆಸ್‌, ಈ ಪ್ರಕರಣಕ್ಕೂ ನಮಗೂ ಏನೂ ಸಂಬಂಧವೇ ಇಲ್ಲ ಅಂತ ದೂರ ಉಳಿದು ಬಿಟ್ಟಿದೆ. ಜೊತೆಗೆ ʻಕಾಂಗ್ರೆಸ್‌ ಮತ್ತು ಧೀರಜ್‌ ಕುಮಾರ್‌ ಬ್ಯುಸಿನೆಸ್‌ಗೂ ಯಾವ್ದೇ ರೀತಿ ಕನೆಕ್ಷನ್‌ ಇಲ್ಲ. ಇದ್ರ ಬಗ್ಗೆ ಕೇವಲ ಧೀರಜ್‌ ಕುಮಾರ್‌ ಉತ್ತರ ನೀಡ್ಬೇಕುʼ ಅಂತ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಅಂದ್ಹಾಗೆ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಧೀರಜ್‌ ಕುಮಾರ್‌ ಸಾಹು ಅವ್ರ ಆಸ್ತಿಗೆ ಸಂಬಂಧಪಟ್ಟು ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಡಿಸೆಂಬರ್‌ 6 ರಂದು ಐಟಿ ದಾಳಿ ನಡೆಸಿತ್ತು. ಇದುವರೆಗೆ ಸುಮಾರು 355 ಕೋಟಿ ರೂಪಾಯಿ ನಗದು ಹಣವನ್ನ ಐಟಿ ವಶಪಡಿಸಿಕೊಂಡಿದೆ.

-masthmagaa.com

Contact Us for Advertisement

Leave a Reply