ನಾಳೆಯಿಂದ ವಿದೇಶ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ! ಇಲ್ಲಿದೆ ಮಾಹಿತಿ!

masthmagaa.com:

ಪ್ರಧಾನಿ ನರೇಂದ್ರ ಮೋದಿಯವರು ನಾಳೆಯಿಂದ ಮತ್ತೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಮೇ 19 ಅಂದ್ರೆ ನಾಳೆ ಮೊದಲಿಗೆ ಮೋದಿ ಜಪಾನ್‌ಗೆ ಭೇಟಿ ನೀಡಲಿದ್ದಾರೆ. ಜಪಾನ್‌ನ ಹಿರೋಶಿಮಾದಲ್ಲಿ ಮೇ 19 ರಿಂದ 21ರ ವರೆಗೆ ನಡೆಯಲಿರುವ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಬಳಿಕ ಮೇ 22ರಿಂದ 24ರವೆರೆಗೆ ಆಸ್ಟ್ರೇಲಿಯಾಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲಿ ಈ ಮುಂಚೆ ಕ್ವಾಡ್‌ ಸಭೆ ನಿಗದಿಯಾಗಿತ್ತು. ಆದ್ರೆ ಅಮೆರಿಕ ಅಧ್ಯಕ್ಷ ಬೈಡೆನ್‌ ಅವರು ಆಸ್ಟ್ರೇಲಿಯಾ ಪ್ರವಾಸವನ್ನ ರದ್ಧುಗೊಳಿಸಿರುವ ಕಾರಣ ಕ್ವಾಡ್‌ ಸಭೆ ನಡೆಯುತ್ತಿಲ್ಲ. ಇನ್ನುಳಿದಂತೆ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿದ್ದ ಹಲವು ಕಾರ್ಯಕ್ರಮಗಳು ಹಾಗೇಯೇ ಮುಂದುವರೆಯಲಿದೆ. ಅದರಲ್ಲಿ ಯಾವ ಚೇಂಜಸ್‌ ಇಲ್ಲ. ಹೀಗಾಗಿ ಮೋದಿಯವರ ಆಸ್ಟ್ರೇಲಿಯಾ ಪ್ರವಾಸ ಎಂದಿನಂತೆ ಇರಲಿದೆ

-masthmagaa.com

Contact Us for Advertisement

Leave a Reply