ಪರಾಕ್ರಮ್‌ ದಿವಸ್:‌ ಅಂಡಮಾನ್-ನಿಕೋಬಾರ್‌ನ 21 ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರು

masthmagaa.com:

ಅಪ್ರತಿಮ ಹೋರಾಟಗಾರ ಸ್ವತಂತ್ರ ವೀರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವ್ರ 126ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ ಪರಾಕ್ರಮ್‌ ದಿವಸ್‌ಅನ್ನ ಆಚರಣೆ ಮಾಡಲಾಗಿದೆ. ಈ ಕಡೆ ಪ್ರಧಾನಿ ಮೋದಿ ಕೂಡ ಭಾರತದ ಇತಿಹಾಸಕ್ಕೆನೇತಾಜಿ ಅವರ ಕೊಡುಗೆಯನ್ನ ಸ್ಮರಿಸಿಕೊಳ್ತೇನೆ. ಬೋಸ್‌ರವರ ಆಲೋಚನೆಗಳಿಂದ ನಾನು ಆಳವಾಗಿ ಪ್ರಭಾವಿತನಾಗಿದ್ದೇನೆ. ಅವರ ಕನಸಿನ ಭಾರತವನ್ನ ಸಾಕಾರಗೊಳಿಸೋಕೆ ಕೆಲ ಮಾಡ್ತಿದ್ದೇನೆ ಅಂತ ಟ್ವೀಟ್‌ ಮಾಡಿದ್ದಾರೆ. ಅಂದ್ಹಾಗೆ ಬೋಸ್‌ರವ್ರ ಜನ್ಮದಿನದ ನೆನಪಿಗಾಗಿ 2021ರಲ್ಲಿ ಜನವರಿ 23ನ್ನ ಪರಾಕ್ರಮ್‌ ದಿವಸ್‌ ಅಂತ ಘೋಷಿಸಲಾಗಿತ್ತು. ಈ ಪರಾಕ್ರಮ ದಿವಸದ ಅಂಗವಾಗಿ ಅಂಡಮಾನ್-ನಿಕೋಬಾರ್‌ನ 21 ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನ ಇಡಲಾಗಿದೆ. ಈ ಕಾರ್ಯಕ್ರಮಕ್ಕೆ ಮೋದಿ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಭಾಗವಹಿಸಿದ್ದಾರೆ. ಇದೇ ವೇಳೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ದ್ವೀಪದಲ್ಲಿ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನ ಅನಾವರಣಗೊಳಿಸಿದ್ದಾರೆ. ಇದೂ ಕೂಡ ರಾಜಕೀಯಗೊಂಡಿದ್ದು, ಪಾಪುಲ್ಯಾರಿಟಿ ಪಡೆಯೋಕೆ ಮೋದಿ ದ್ವೀಪಗಳಿಗೆ ಹೆಸರಿಟ್ಟಿದಾರೆ ಅಂತ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply