ಇದೇ ಮೊದಲ ಬಾರಿಗೆ ಅಮೆರಿಕದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಲಿದ್ದಾರೆ ಮೋದಿ!

masthmagaa.com:

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವ್ರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರ ಜೊತೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಿದ್ದಾರೆ ಅಂತ ವೈಟ್‌ಹೌಸ್‌ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರೋ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ಪ್ರಧಾನಿ ಮೋದಿ ಅವರು ಭೇಟಿಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಿರೋದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಜೊತೆಗೆ ಈ ಪ್ರೆಸ್‌ ಕಾನ್ಫರೆನ್ಸ್‌ ಮುಖ್ಯವಾಗಿದೆ ಅಂತ ನಾವು ಭಾವಿಸುತ್ತೇವೆ. ಅಲ್ದೆ ಇದು ಇಂಪಾರ್ಟೆಂಟ್‌ ಅಂತ ಮೋದಿಯವ್ರೂ ಕೂಡ ಭಾವಿಸಿದ್ದು ನಮಗೆ ಸಂತೋಷವಾಗಿದೆ. ಇನ್ನು. ಪತ್ರಿಕಾಗೋಷ್ಠಿಯಲ್ಲಿ ಉಭಯ ನಾಯಕರು ಅಮೆರಿಕದ ಮಾಧ್ಯಮದಿಂದ ಒಂದು ಪ್ರಶ್ನೆ ಮತ್ತು ಭಾರತೀಯ ಪತ್ರಕರ್ತರಿಂದ ಒಂದು ಪ್ರಶ್ನೆಗೆ ಉತ್ತರಿಸಲಿದ್ದಾರೆ ಅಂತ ಕಿರ್ಬಿ ಹೇಳಿದ್ದಾರೆ. ಅಂದ್ಹಾಗೆ ಪ್ರಧಾನಿ ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿಲ್ಲ. ಆದ್ರೆ ಹೆಚ್ಚಾಗಿ ಮಾಧ್ಯಮದವರಿಗೆ ನೇರಾ ಸಂದರ್ಶನಗಳನ್ನಷ್ಟೇ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply