ಏಪ್ರಿಲ್ 8ಕ್ಕೆ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸಿಂಗ್

masthmagaa.com:

ದೇಶದಲ್ಲಿ ಕೊರೋನಾದ ಮೊದಲ ಅಲೆಯನ್ನ ಎರಡನೇ ಅಲೆ ಮೀರಿಸಿ ಹೋಗಿದೆ. ಅಂದ್ರೆ ಕಳೆದ ವರ್ಷ ಒಂದೇ ದಿನ ದೃಢಪಟ್ಟ ಕೇಸ್​ಗಿಂತ ಹೆಚ್ಚು ಕೇಸ್​ ಈಗ ದಾಖಲಾಗಿದೆ. ಎಷ್ಟು ಗೊತ್ತಾ.. ಬರೋಬ್ಬರಿ 1 ಲಕ್ಷದ 3 ಸಾವಿರ.. ಇದು ಈವರೆಗಿನ ಹೈಯೆಸ್ಟ್ ನಂಬರ್. ಕಳೆದ ವರ್ಷ ಕೊರೋನಾ ಪೀಕ್​​ಗೆ ಹೋಗಿದ್ದಾಗಲೇ 97 ಸಾವಿರ ಜನರಿಗೆ ಸೋಂಕು ದೃಢಪಟ್ಟಿತ್ತು. ಅದಾದ ಬಳಿಕ ಇಳೀತಾ ಹೋಗಿತ್ತು. ಇನ್ನು ದೇಶದಲ್ಲಿ ಕೊರೋನಾ ಹೆಚ್ಚಾಗ್ತಿರೋ 11 ರಾಜ್ಯಗಳ ಜೊತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ. ಅದಕ್ಕಿಂತಾನೂ ಏಪ್ರಿಲ್ 8ನೇ ತಾರೀಖು ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ದೇಶದಲ್ಲಿ ಮತ್ತೊಮ್ಮೆ ಏನಾದ್ರೂ ಲಾಕ್​ಡೌನ್​ ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಾ ಅನ್ನೋ ಕುತೂಹಲ ಮೂಡಿದೆ.

-masthmagaa.com

Contact Us for Advertisement

Leave a Reply