ಹೌಡಿ ಮೋದಿಯಲ್ಲಿ ವಿದೇಶಾಂಗ ನೀತಿ ಉಲ್ಲಂಘನೆ: ಕಾಂಗ್ರೆಸ್ ಕಿಡಿ

ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಿಂದ ವಿದೇಶಾಂಗ ನೀತಿಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ಬೇರೆ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವಿದೇಶಿ ನೀತಿ ಉಲ್ಲಂಘಿಸಿದ್ದಾರೆ. ಮೋದಿ ಅಮೆರಿಕಾದಲ್ಲೂ ನಮ್ಮ ಪ್ರಧಾನಿಯೇ. ಚುನಾವಣಾ ಪ್ರಚಾರಕ ಅಲ್ಲ. ಟ್ರಂಪ್‍ಗಾಗಿ ಅಮೆರಿಕಾದಲ್ಲಿ ಮೋದಿ ಚುನಾವಣಾ ಪ್ರಚಾರ ಮಾಡಿದ್ದರಿಂದ ಭಾರತ ಮತ್ತು ಅಮೆರಿಕದ ವಿದೇಶಾಂಗ ನೀತಿಯ ಉಲ್ಲಂಘನೆಯಾಗಿದೆ ಅಂತ ಹೇಳಿದ್ದಾರೆ. ಹೌಡಿ ಮೋದಿಯಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ, ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ ಎಂದು ಹೇಳಿದ್ದರು.

Contact Us for Advertisement

Leave a Reply