ಖರ್ಗೆ ಪ್ರಧಾನಿ ಅಭ್ಯರ್ಥಿ! 2024ಕ್ಕೆ ಮೋದಿ Vs ಮಲ್ಲಿಕಾರ್ಜುನ ಖರ್ಗೆ?

masthmagaa.com:

ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಸಮರ ಸಾರಿರೋ ಪ್ರತಿಪಕ್ಷಗಳ ʻಇಂಡಿಯಾʼ ಮೈತ್ರಿಕೂಟದ 4ನೇ ಸಭೆ ಇಂದು ನಡೆದಿದೆ. ಸಭೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಮೋದಿ ವಿರುದ್ಧ ಪ್ರಧಾನಿ ಫೇಸ್‌ಗೆ ಕಾಂಗ್ರೆಸ್‌ನ ಮುಖ್ಯಸ್ಥರಾಗಿರೊ ಮಲ್ಲಿಕಾರ್ಜುನ ಖರ್ಗೆ ಅವ್ರ ಹೆಸರು ಕೇಳಿ ಬಂದಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಕೂಡ ಖರ್ಗೆ ಅವ್ರನ್ನ ಸಪೋರ್ಟ್‌ ಮಾಡಿದ್ದಾರೆ. ಇಂಡಿಯಾ ಮೈತ್ರಿಕೂಟದಿಂದ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಬೇಕು ಅಂತ ದೀದಿ ಇಂದು ನಡೆದ ಸಭೆಯಲ್ಲಿ ಪ್ರಪೋಸಲ್‌ ಒಂದನ್ನ ಮುಂದಿಟ್ಟಿದ್ದಾರೆ. ಈ ಪ್ರಸ್ತಾವನೆಗೆ ಕೇಜ್ರಿವಾಲ್‌ ಸೇರಿದಂತೆ 12 ಪಕ್ಷದವ್ರು ಬೆಂಬಲ ಸೂಚಿಸಿದ್ದಾರೆ ಅಂತ ಮೂಲಗಳಿಂದ ತಿಳಿದು ಬಂದಿದೆ. ಸಭೆಯಲ್ಲಿ ಭಾಗವಹಿಸಿದ್ದ 28 ಪಕ್ಷಗಳ ನಾಯಕರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಬಳಿಕ, ಪಿಎಂ ಫೇಸ್‌ ವಿಷಯ ಮುನ್ನೆಲೆಗೆ ಬಂದಿದೆ. ಸೀಟ್‌ ಶೇರಿಂಗ್‌, ಜಂಟಿ ಅಭಿಯಾನಗಳು, ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸ್ಟ್ರಾಟಜಿ ಸೇರಿದಂತೆ ವಿವಿಧ ವಿಷಯಗಳನ್ನ ಚರ್ಚಿಸಲಾಗಿದೆ ಎನ್ನಲಾಗಿದೆ. ಇತ್ತ ಪಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರೊ ಖರ್ಗೆ, ಮೊದಲು ಗೆಲುವಿನ ಬಗ್ಗೆ ವಿಚಾರ ಮಾಡ್ಬೇಕು. ಆಮೇಲೆ ಪ್ರಧಾನಿ ಯಾರು ಅನ್ನೊದನ್ನ ನೋಡಬೇಕು ಅಂತ ಹೇಳುವ ಮೂಲಕ, ಪ್ರಸ್ತಾವನೆಗೆ ಸದ್ಯ ತಣ್ಣೀರು ಎರೆಚುವ ರೀತಿ ಮಾತಾಡಿದ್ದಾರೆ. ಅಂದ್ಹಾಗೆ ಈವರೆಗೂ ಇಂಡಿಯಾ ಮೈತ್ರಿಕೂಟದಲ್ಲಿ ಮೋದಿ Vs ಯಾರು ಅನ್ನೊ ಬಗ್ಗೆ ಕ್ಲಾರಿಟಿ ಇಲ್ಲ. ಪ್ರತಿಯೊಂದು ಪಕ್ಷದವ್ರು ತಮ್ಮ ತಮ್ಮ ನಾಯಕರನ್ನ ಪಿಎಂ ಫೇಸ್‌ ಅಂತ ಹೇಳಿಕೊಳ್ಳುತ್ತಿದ್ರು. ಜೆಡಿಯು ನಿತೀಶ್ ಕುಮಾರ್‌ ಹೆಸರು ಹೇಳಿದ್ರೆ, ‌ಟಿಎಂಸಿ ದೀದಿ ಹೆಸರು ಹೇಳ್ತಿತ್ತು. ಇತ್ತ ಆಪ್‌ ಕೇಜ್ರಿವಾಲ್‌ ಅಂತಿದ್ರು ಇದರ ನಡುವೆ ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿ ಹೆಸರು ಕೂಡ ಕೇಳಿ ಬರ್ತಿತ್ತು. ಆದ್ರೆ ಇದೀಗ ಮೋದಿ ವಿರುದ್ಧ ಖರ್ಗೆ ಅವರಂಥ ಹಿರಿಯ ನಾಯಕರ ಹೆಸರು ಕೇಳಿಬಂದಿದೆ. ಈ ಮೂಲಕ ದೇಶದಲ್ಲಿರುವ 25% ದಲಿತ ಮತಗಳನ್ನ ಸೆಳೆಯುವ ಪ್ಲಾನ್‌ ಮಾಡಲಾಗ್ತಿದೆ ಅಂತ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply