ಪಾಕ್​​ನಲ್ಲಿ ಮಲಾಲಾಗೆ ಬೆದರಿಕೆ ಹಾಕಿದ್ದ ಮೌಲ್ವಿ ಬಂಧನ

masthmagaa.com:

ನೋಬೆಲ್ ಪುರಸ್ಕೃತೆ ಮಲಾಲಾ ಯೂಸೂಫ್​​ಜೈ ಬೆದರಿಕೆ ಹಾಕಿದ್ದ ಮೌಲ್ವಿಯೊಬ್ಬರನ್ನು ಅರೆಸ್ಟ್​ ಮಾಡಲಾಗಿದೆ. ಇತ್ತೀಚೆಗಷ್ಟೇ ಬ್ರಿಟಿಷ್ ಮ್ಯಾಗ್ಜೀನ್ ಒಂದಕ್ಕೆ ಇಂಟರ್​​ವ್ಯೂ ಒಂದ್ರಲ್ಲಿ ಮದುವೆ ಬಗ್ಗೆ ಮಾತನಾಡಿದ್ದ ಮಲಾಲಾ, ಮದುವೆ ಅನ್ನೋದು ಯಾಕೆ ಒಂದು ಪಾಲುದಾರಿಕೆಯಾಗಿ ಇರಬಾರದು ಅಂತ ಪ್ರಶ್ನಿಸಿದ್ರು. ಇದ್ರಿಂದ ಸಿಟ್ಟಿಗೆದ್ದಿದ್ದ ಮೌಲ್ವಿ ಮುಫ್ತಿ ಸರ್ದಾರ್ ಅಲಿ ಹಕ್ಕಾನಿ, ಮಲಾಲಾ ಈ ಹೇಳಿಕೆ ಮೂಲಕ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಆಕೆ ಪಾಕಿಸ್ತಾನಕ್ಕೆ ಬಂದ ಕೂಡಲೇ ಆತ್ಮಾಹುತಿ ದಾಳಿ ನಡೆಸ್ತೀನಿ ಅಂತ ಬೆದರಿಸಿದ್ರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಅದ್ರ ಬೆನ್ನಲ್ಲೇ ಈಗ ಖೈಬರ್ ಪಖ್ತುಂಕ್ವಾದಲ್ಲಿ ಮೌಲ್ವಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply