ಪಾಕ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಉಗ್ರ ದಾಳಿ! 10 ಪೊಲೀಸ್‌ ಸಿಬ್ಬಂದಿ ಸಾವು!

masthmagaa.com:

ಪಾಕಿಸ್ತಾನದ ಪೊಲೀಸ್‌ ಸ್ಟೇಷನ್‌ ಒಂದರ ಮೇಲೆ ಉಗ್ರದಾಳಿ ನಡೆದಿದ್ದು 10 ಮಂದಿ ಪೊಲೀಸ್‌ ಸಿಬ್ಬಂದಿ ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಫೆಬ್ರುವರಿ 05 ರಂದು ಪಾಕ್‌ನ ವಾಯುವ್ಯ ಭಾಗದ ದ್ರಬಾನ್‌ ಪ್ರದೇಶದ ಪೊಲೀಸ್‌ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದೆ. ಮೊದಲು ಸ್ನೈಪರ್‌ ಬಂದೂಕುಗಳಿಂದ ದೂರದಿಂದ್ಲೇ ದಾಳಿ ನಡೆಸಿ, ನಂತರ ಪೊಲೀಸ್‌ ಸ್ಟೇಷನ್‌ ಒಳಗೆ ನುಗ್ಗಿ ಗ್ರನೇಡ್ ದಾಳಿ ನಡೆಸಿದ್ದಾರೆ. ಸದ್ಯ ಈ ಬಗ್ಗೆ ಯಾವುದೇ ಉಗ್ರ ಸಂಘಟನೆಯೂ ಹೊಣೆ ಹೊತ್ಕೊಂಡಿಲ್ಲ. ಅಂದ್ಹಾಗೆ 2022 ರಿಂದ್ಲೂ ಪಾಕ್‌ನಲ್ಲಿ ಇಸ್ಲಾಮಿಸ್ಟ್ ಉಗ್ರರು ಭದ್ರತಾ ಸಿಬ್ಬಂದಿಯನ್ನ ಟಾರ್ಗೆಟ್‌ ಮಾಡಿ ದಾಳಿ ಮಾಡ್ತಾನೆ ಇದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದಷ್ಟೇ ಅಲ್ಲಿನ ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಚುನಾವಣಾ ಅಭ್ಯರ್ಥಿಯೊಬ್ರನ್ನ ಹತ್ಯೆ ಮಾಡಲಾಗಿತ್ತು. ಅದೇ ದಿನ ಮತ್ತೊಬ್ಬ ರಾಜಕೀಯ ನಾಯಕನನ್ನ, ಬಲೋಚಿಸ್ತಾನ್‌ ಪ್ರಾಂತ್ಯದಲ್ಲಿರೋ ಆತನ ಪಾರ್ಟಿಯ ಆಫೀಸ್‌ನಲ್ಲೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇನ್ನು ಕಳೆದ ಡಿಸೆಂಬರ್‌ನಲ್ಲಿ ಕನಿಷ್ಠ 23 ಮಂದಿ ಪಾಕ್‌ ಸೈನಿಕರು ಉಗ್ರರ ದಾಳಿಗೆ ಪ್ರಾಣ ಕಳೆದುಕೊಂಡಿದ್ರು. ಸದ್ಯ ಪಾಕ್‌ ಚುನಾವಣೆ ಎದುರಿರೋ ಬೆನ್ನಲ್ಲೇ ಸಾಲು ಸಾಲಾಗಿ ಉಗ್ರರು ದಾಳಿ ನಡೆಸಿ, ಉದ್ವಿಗ್ನತೆ ಸೃಷ್ಟಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply