ಮಯನ್ಮಾರ್‌ನಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್!

masthmagaa.com:

ಮಯನ್ಮಾರ್​ನಲ್ಲಿ ಸೇನೆ ಅಧಿಕಾರ ತನ್ನ ಕೈಗೆ ತೆಗೆದುಕೊಂಡಿರೋದನ್ನ ವಿರೋಧಿಸಿ ಜನರ ಪ್ರತಿಭಟನೆ ಜೋರಾಗ್ತಿದೆ. ಮಯನ್ಮಾರ್​ನ ಅತಿದೊಡ್ಡ ನಗರ, ಮಾಜಿ ರಾಜಧಾನಿ ಯಾಂಗೋನ್​ನಲ್ಲಿ ಸಾವಿರಾರು ಜನ ರಸ್ತೆಗಿಳಿದು ಪ್ರಜಾಪ್ರಭುತ್ವ ಪರವಾಗಿ ಪ್ರತಿಭಟನೆ ಮಾಡಿದ್ದಾರೆ. ನಾವು ನಮಗೆ ಬೇಕಾದ ಸರ್ಕಾರ ಆಯ್ಕೆ ಮಾಡಿಕೊಂಡಿದ್ದೇವೆ. ಅದು ಸರಿ ಇಲ್ಲ ಅಂತಾ ಹೇಳೋಕೆ ಸೇನೆ ಯಾರು? ಸೇನೆ ಕೆಲಸ ದೇಶದ ರಕ್ಷಣೆ ಮಾಡೋದು. ಈ ರೀತಿ ಸರ್ಕಾರ ವಜಾ ಮಾಡಿ ತನೇ ರಾಜಕಾರಣ ಮಾಡೋದಲ್ಲ ಅಂತಾ ಘೋಷಣೆ ಕೂಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸೇನಾ ವಿರೋಧಿ ಸೆಂಟಿಮೆಂಟ್ ಜೋರಾಗ್ತಿದೆ.

ಇದರಿಂದ ಚಿಂತೆಗೆ ಓಳಗಾಗಿರೋ ಮಯನ್ಮಾರ್ ಸೇನೆ ಫೇಸ್​ಬುಕ್ ಬಳಿಕ ಈಗ ಟ್ವಿಟರ್​​, ಇನ್ಸ್ಟಾಗ್ರಾಮ್​ಗಳನ್ನೂ ಬ್ಲಾಕ್ ಮಾಡುವಂತೆ ಅಲ್ಲಿನ ಮೊಬೈಲ್ ನೆಟ್​ವರ್ಕ್ ಕಂಪನಿಗಳಿಗೆ ಆದೇಶ ನಿಡಿದೆ. ಜನ ಸೋಷಿಯಲ್ ಮಿಡಿಯಾದಲ್ಲಿ ರೆಸ್ಪೆಕ್ಟ್ ಅವರ್ ವೋಟ್ಸ್, ಸೇವ್ ಮಯನ್ಮಾರ್, ಹಿಯರ್​ ದ ವಾಯ್ಸ್ ಆಫ್ ಮಯನ್ಮಾರ್​​ ಅಂತ ನಾನಾ ರೀತಿಯ ಸೇನಾ ವಿರೋಧಿ ಹ್ಯಾಷ್​​ಟ್ಯಾಗ್ ಕ್ರಿಯೇಟ್ ಮಾಡಿ ಅಭಿಯಾನ ಆರಂಭ ಮಾಡಿದ್ರು. ಜೊತೆಗೆ ರಾತ್ರಿ ವೇಳೆ ಸಾಮೂಹಿಕವಾಗಿ ವಾಹನಗಳ ಹಾರ್ನ್ ಬಾರಿಸೋದು, ಪಾತ್ರೆಗಳನ್ನ ಡೋಲಿನಂತೆ ತಟ್ಟಿ ಶಬ್ದಮಾಡೋದು ಎಲ್ಲ ಮಾಡಿ ಸೇನೆ ಮಾಡಿದ್ದಕ್ಕೆ ನಮ್ಮ ಒಪ್ಪಿಗೆ ಇಲ್ಲ ಅಂತ ಮಯನ್ಮಾರ್ ಜನ ಆಕ್ರೋಶ ವ್ಯಕ್ತಪಡಿಸ್ತಿದಾರೆ. ಇದರಿಂದ ದಂಗಾಗಿರೋ ಸೇನೆ ಈಗ ದಿಕ್ಕು ತೋಚದೆ ಎಲ್ಲಾ ಸೋಶಿಯಲ್ ಮೀಡಿಯಾಗಳ ಮೇಲೆ ಬ್ಯಾನ್ ವಿಧಿಸಿದೆ.

-masthmagaa.com

Contact Us for Advertisement

Leave a Reply