ಪೂನಂ ಪಾಂಡೆ ವಿರುದ್ಧ ಕೇಸ್‌ ಹಾಕಲು ಆಗ್ರಹ:‌ ರೊಚ್ಚಿಗೆದ್ದ ಸಿನಿರಂಗ

masthmagaa.com:

ಕ್ಯಾನ್ಸರ್‌ ಜಾಗೃತಿ ಮೂಡಿಸುವ ನೆಪದಲ್ಲಿ ಸಾವಿನ ಹುಚ್ಚಾಟ ಮೆರೆದಿದ್ದ ʻಸೋ ಕಾಲ್ಡ್‌ʼ ನಟಿ, ಮಾಡೆಲ್‌, ಪೂನಂ ಪಾಂಡೆಗೆ ಈಗ ಸಿನಿಮಾ ರಂಗ ಬಿಸಿ ಮುಟ್ಟಿಸೋಕೆ ಮುಂದಾಗಿದೆ. ಸಾವಿನ ಸುಳ್ಳು ಸುದ್ದಿ ಮೂಲಕ ಪ್ರಚಾರ ಗಿಟ್ಟಿಸಿದ ಪೂನಂ ಮೇಲೆ FIR ಮಾಡ್ಬೇಕು ಅಂತ ಭಾರತೀಯ ಸಿನಿ ಕಾರ್ಮಿಕರ ಸಂಘ AICWA ಆಗ್ರಹಿಸಿದೆ. ಈ ವಿಚಾರವಾಗಿ ಹೇಳಿಕೆ ಪ್ರಕಟಿಸಿರೋ AICWA, “ನಟಿ ಪೂನಂ ಪಾಂಡೆಯ ಫೇಕ್‌ PR ಗಿಮಿಕ್‌ ದೊಡ್ಡ ತಪ್ಪು. ಗರ್ಭಕೋಶ ಕ್ಯಾನ್ಸರ್‌ನ ಸೋಗಿನಲ್ಲಿ ಸ್ವಯಂಪ್ರಚಾರ ಪಡೆದಿದ್ದನ್ನ ಒಪ್ಪೋಕಾಗಲ್ಲ. ಈ ಗಿಮಿಕ್‌ನಿಂದ ಇನ್ಮೇಲೆ ಭಾರತದ ಫಿಲ್ಮ್‌ ಇಂಡಸ್ಟ್ರಿಯಲ್ಲಿ ಯಾರೇ ಸಾವನ್ನಪ್ಪಿದ ಸುದ್ದಿ ಬಂದ್ರೂ ಜನ ನಂಬೊಕೆ ಹಿಂಜರೀತಾರೆ. PRಗೋಸ್ಕರ ಫಿಲ್ಮ್‌ ಇಂಡಸ್ಟ್ರಿಲೀ ಯಾರೂ ಈ ಮಟ್ಟಕ್ಕೆ ಇಳದಿರ್ಲಿಲ್ಲ. ಪೂನಂ ಪಾಂಡೆ ಮ್ಯಾನೇಜರ್‌ ಸುಳ್‌ಸುದ್ದಿಯನ್ನ ಕನ್‌ಫರ್ಮ್‌ ಮಾಡಿದ್ದಾರೆ. ಹೀಗಾಗಿ ಈ ಥರ ಸಾವಿನ ಸುದ್ದಿಯನ್ನ PRಗೆ ಬಳೋದನ್ನ ತಡೆಯುವಂತೆ ಆಗ್ಬೇಕು. ಅದಕ್ಕಾಗಿ ಪೂನಂ ಪಾಂಡೆ ಮತ್ತು ಅವ್ರ ಮ್ಯಾನೇಜರ್‌ ಮೇಲೆ FIR ಆಗ್ಬೇಕು. ಭಾರತದ ಸಿನಿ ಇಂಡಸ್ಟ್ರಿ, ಸೇರಿದಂತೆ ಇಡೀ ದೇಶ ಶ್ರದ್ದಾಂಜಲಿ ಸಲ್ಲಿಸಿತ್ತು ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply