ಪೂನಂ ಪಾಂಡೆ ಸತ್ತಿಲ್ಲ: ಕ್ಯಾನ್ಸರ್‌ ಅವೇರ್‌ನೆಸ್‌ ಹೈಡ್ರಾಮಾ!

masthmagaa.com:

ನಟಿ ಪೂನಂ ಪಾಂಡೆ ಸತ್ತಿದ್ದಾರೆ ಅಂತ ನಿನ್ನೆ ಸುದ್ದಿ ಹರಿದಾಡಿತ್ತು. ಖುದ್ದು ಅವರ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಆ ರೀತಿ ಅವರ ಟೀಂ ಪೋಸ್ಟ್‌ ಹಾಕಿತ್ತು. ಗರ್ಭಕೋಶ ಕ್ಯಾನ್ಸರ್‌ನಿಂದ ಅವ್ರು ಮೃತಪಟ್ಟಿದ್ದಾರೆ ಅಂತ ಹೇಳಲಾಗಿತ್ತು. ಆದ್ರೆ ಇದೀಗ ಅವ್ರು ಸತ್ತಿಲ್ಲ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಪೂನಂ ಪಾಂಡೆ ಮತ್ತೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿ ವೀಡಿಯೋ ಮೆಸೇಜ್‌ ಒಂದನ್ನ ಹಾಕಿದ್ದಾರೆ. ಇದ್ರಲ್ಲಿ ʻನಾನು ಬದುಕಿದ್ದೀನಿ. ಚೆನ್ನಾಗಿದ್ದೀನಿ. ಸರ್ವಿಕಲ್‌ ಕ್ಯಾನ್ಸರ್‌ ನನ್ನನ್ನ ಬಲಿ ಪಡೀಲಿಲ್ಲ. ಅದ್ರ ಬಗ್ಗೆ ಅವೇರ್‌ನೆಸ್‌ ಮೂಡಿಸೋಕೆ ಆ ರೀತಿ ಪೋಸ್ಟ್‌ ಹಾಕಿದ್ದೆ ಅಂದಿದ್ದಾರೆ. ಅವೇರ್ನೆಸ್‌ ಮೂಡ್ಸೂದೇನೋ ಸರಿ. ಆದ್ರೆ ಈ ರೀತಿ ತಮ್ಮ ಸಾವನ್ನೇ ಡ್ಯೂಪ್‌ ಮಾಡಿರೋ ವಿಚಾರ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ದೇ ಅವರ ಮ್ಯಾನೇಜರ್‌ ಕೂಡ ನಿನ್ನೆ ಪೂನಂ ಪಾಂಡೆಯವ್ರ ಸಹೋದರಿ ಹಾಗೂ ಕುಟುಂಬಸ್ತರನ್ನ ಟ್ರೇಸ್‌ ಮಾಡೋಕೆ ಆಗ್ತಿಲ್ಲ. ಅವರ ಮೃತದೇಹ ಕೂಡ ಸಿಕ್ಕಿಲ್ಲ ಅಂತ ಕತೆ ಹೇಳಿದ್ರು. ಅಂದ್ಹಾಗೆ ಪೂನಂ ಪಾಂಡೆ ತಮ್ಮ ಜೀವನದುದ್ದಕ್ಕೂ ಈ ರೀತಿಯ ಗಿಮಿಕ್‌ಗಳಿಂದಲೇ ಸುದ್ದಿಯಾಗಿದ್ರು. ಆದ್ರೆ ತಮ್ಮ ಸಾವನ್ನ ಕೂಡ ಈ ರೀತಿ ಬಳಸ್ಕೊರ್ತಾರೆ ಅಂತ ಯಾರೂ ನಿರೀಕ್ಷಿಸಿರ್ಲಿಲ್ಲ. ಈ ಗಿಮಿಕ್‌ನಿಂದ ಕ್ಯಾನ್ಸರ್‌ ಬಗ್ಗೆ ಎಷ್ಟು ಅವೇರ್‌ನೆಸ್‌ ಬಂತೋ ಗೊತ್ತಿಲ್ಲ, ಆದ್ರೆ ಮರೆತು ಹೋಗಿದ್ದ ಪೂನಂ ಪಾಂಡೆ ಮಾತ್ರ ಸುದ್ದಿಯಾದ್ರು.

-masthmagaa.com

Contact Us for Advertisement

Leave a Reply