ಕ್ರಿಸ್ಟಿಯಾನೋ ರೊನಾಲ್ಡೊ ಹೊಸ ಕ್ಲಬ್‌ಗೆ ಸೇರ್ಪಡೆ!

masthmagaa.com:

ಇತ್ತೀಚಿಗಷ್ಟೇ ಮ್ಯಾಂಚಸ್ಟರ್‌ ಯುನೈಟೆಡ್ ಫುಟ್‌ಬಾಲ್‌ ಕ್ಲಬ್‌ನ್ನ ತೊರೆದಿದ್ದ ಸ್ಟಾರ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ ಸೌದಿ ಕ್ಲಬ್‌ಗೆ ಸೇರಿದ್ದಾರೆ. ಸೌದಿ ಅರೆಬಿಯಾದ ಅಲ್‌-ನಾಸ್ರ್ ಫುಟ್‌ಬಾಲ್‌ ಕ್ಲಬ್‌ ಜೊತೆ 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 37 ವರ್ಷದ ರೊನಾಲ್ಡೊ ಮುಂದಿನ 2 ವರ್ಷಗಳ ಕಾಲ ಅಲ್‌-ನಾಸ್ರ್‌ ಪರವಾಗಿ ಆಡಲಿದ್ದು, 2 ವರ್ಷಗಳಿಗೆ ಬರೋಬ್ಬರಿ 200 ಮಿಲಿಯನ್‌ ಯುರೋ ಅಂದ್ರೆ ಸುಮಾರು 1,700 ಕೋಟಿ ರೂಪಾಯಿ ಪಡೆಯಲಿದ್ದಾರೆ. ಅಂದ್ಹಾಗೆ ಫುಟ್‌ಬಾಲ್‌ ವಿಶ್ವಕಪ್ ಆರಂಭಕ್ಕೆ ಮುನ್ನ ಸಂದರ್ಶನ ಒಂದ್ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಜಿ ಮ್ಯಾನೇಜರ್ ರಾಲ್ಫ್ ರಾಂಗ್ನಿಕ್ ವಿರುದ್ಧ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮ್ಯಾಂಚೆಸ್ಟರ್ ಯುನೈಟೆಡ್ ರೊನಾಲ್ಡೊರ ಒಪ್ಪಂದವನ್ನ ಏಕಾಏಕಿ ಕೊನೆಗೊಳಿಸಿತ್ತು.

-masthmagaa.com

Contact Us for Advertisement

Leave a Reply