ಫೇಕ್‌ ಮೆಸೇಜ್‌ನಿಂದ 1 ಕೋಟಿ ರೂಪಾಯಿ ಹಣ ಕಳೆದುಕೊಂಡ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌!

masthmagaa.com:

ಪುಣೆಯ ಪ್ರಸಿದ್ದ Serum Institute of India (SII) ಫಾರ್ಮಸಿಟಿಕಲ್‌ ಕಂಪನಿ ವಂಚಕರ ಬಲೆಗೆ ಬಿದ್ದು 1 ಕೋಟಿ ಹಣ ಕಳೆದುಕೊಂಡಿದೆ. ಕಂಪನಿಯ ಸಿಇಒ ಅದಾರ್‌ ಪೂನಾವಾಲಾ ಅಂತ ಹೇಳ್ಕೊಂಡು ವಂಚಕರು ಕಂಪನಿ ಡೈರಕ್ಟರ್‌ ಸತೀಶ್‌ ದೇಶ್‌ಪಾಂಡೆಗೆ ಮೆಸೇಜ್‌ ಮಾಡಿದ್ದಾರೆ. ಹಾಗೂ 7 ಅಕೌಂಟ್‌ಗಳಿಗೆ ಹಣ ಕಳಿಸಿ ಅಂತ ಮೆಸೇಜ್‌ನಲ್ಲಿ ಹೇಳಿದ್ದಾರೆ. ಇನ್ನು ಸಿಇಒ ಪೂನಾವಾಲಾ ಮೆಸೇಜ್‌ ಮಾಡಿರೋದು ಅಂತ ನಂಬಿದ್ದ ದೇಶ್‌ಪಾಂಡೆ 1.01 ಕೋಟಿ ಹಣವನ್ನ ಟ್ರಾನ್ಸ್‌ಫರ್‌ ಮಾಡಿದ್ದಾರೆ. ಅದು ಫೇಕ್‌ ಮೆಸೇಜ್‌ ಅಂತ ನಂತರ ತಿಳಿದು ಬಂದಿದೆ. ಕೇಸ್‌ ದಾಖಲಾಗಿದ್ದು ಈ ಸಂಬಂಧ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply