ಪ್ರಜ್ವಲ್ ದೇವರಾಜ್ 35ನೇ ಸಿನಿಮಾ “ಮಾಫಿಯಾ” ಗೆ “ಮಮ್ಮಿ” ಲೋಹಿತ್ ನಿರ್ದೇಶನ!

masthmagaa.com:

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ “ಮಾಫಿಯಾ”. ಈ ಚಿತ್ರವನ್ನು “ಮಮ್ಮಿ” ಚಿತ್ರದ ಖ್ಯಾತಿಯ ಲೋಹಿತ್ ನಿರ್ದೇಶಿಸುತ್ತಿದ್ದಾರೆ. ನವಂಬರ್ 1 ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ.

ಪ್ರಜ್ವಲ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಟಗರು, ಸಲಗ, ಕಾಲೇಜ್ ಕುಮಾರ್, ಜಂಟಲ್ ಮ್ಯಾನ್ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದಿರುವ “ಮಾಸ್ತಿ” ಸಂಭಾಷಣೆ ಬರೆಯುತ್ತಿದ್ದಾರೆ. ಜೆಬಿನ್ ಜಾಕಬ್ ಈ ಚಿತ್ರದ ಛಾಯಾಗ್ರಹಕರು.

-masthmagaa.com

Contact Us for Advertisement

Leave a Reply