ಅಪ್ಪು ಅಂಬುಲೆನ್ಸ್‌ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಪ್ರಕಾಶ್‌ ರೈ

masthmagaa.com:

ಅಪ್ಪು ಅಭಿಮಾನಿಗಳೆಲ್ಲಾ ಅವರ ನೆನಪಿಗೋಸ್ಕರ ಅನ್ನದಾನ, ರಕ್ತದಾನ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರ್ತಿದಾರೆ. ಅದೇ ದಾರಿಯಲ್ಲಿ ಹಿರಿಯ ನಟ ಪ್ರಕಾಶ್‌ ರೈ ಕೂಡ ಸಾಗ್ತಾ ಇದಾರೆ. ಅಪ್ಪು ಅಂಬುಲೆನ್ಸ್‌ ಮಾಡೋದು ಪ್ರಕಾಶ್‌ ಅವರ ಕನಸಾಗಿತ್ತು. ಇದಕ್ಕೋಸ್ಕರ ಅಂತಾನೇ ಪ್ರಕಾಶ್‌ ರೈ ಫೌಂಡೆಶನ್‌ನ ಅಡಿಯಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಅಂಬುಲೆನ್ಸ್‌ನ್ನ ಶುರು ಮಾಡಿದ್ದರು. ಇದೇ ವಿಷಯದ ಕುರಿತಾಗಿ ಕಾಲಿವುಡ್ ನಟ ಸೂರ್ಯ ಮತ್ತು ಮೆಗಾಸ್ಟಾರ್ ಚಿರಂಜೀವಿ ಕೂಡ ಈ ಕಾರ್ಯಕ್ರಮಕ್ಕೆ ಸಾಥ್‌ ಕೊಟ್ಟಿದ್ದಾರೆ.

`ಪುನೀತ ಪರ್ವ’ ಇವೆಂಟ್‌ನಲ್ಲಿ ಯಶ್‌ ಅವರು ಪುನೀತ್‌ ಅವರನ್ನ ನೆನಪು ಮಾಡ್ಕೊಳ್ತಾ “ಯಾರೂ ಕೂಡ ಅನ್ಯತಾ ಭಾವಿಸಬೇಡಿ, ನಂದು ಕೂಡ ಯಶೋ ಮಾರ್ಗ ಅನ್ನುವಂತ ಫೌಂಡೆಶನ್‌ ಇದೆ. ಆ ಫೌಂಡೆಶನ್‌ ಮುಖಾಂತರ ಪ್ರಕಾಶ್‌ ರೈ ಅವರ ಕನಸಿಗೆ ನಾನು ಕೂಡ ಸಹಾಯ ಮಾಡ್ತೀನಿ, ನೀವು ಒಂದ್‌ ಅಂಬುಲೆನ್ಸ್‌ ಕೊಟ್ಟಿದ್ದೀರಾ ಅಂತ ನಾನು ಖುಷಿ ಪಟ್ಟಿದ್ದೆ. ಇಡೀ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಅಪ್ಪು ಎಕ್ಸ್‌ಪ್ರೆಸ್‌ ಒಡಾಡೋ ತರ ಮಾಡೋಣ, ಇನ್ನೂ ಏಲ್ಲೆಲ್ಲಿ ಅಂಬುಲೆನ್ಸ್‌ ಕೊಡೋದು ಪೆಂಡಿಗ್‌ ಇದೆ ಅದರ ಜವಾಬ್ದಾರಿಯನ್ನ ನಾನ್‌ ತಗೋಳ್ತೀನಿ, ಇದಕ್ಕೆ ನಾನೂ ಸಾಥ್‌ ಕೊಡ್ತೀನಿ” ಅಂತ ಭರವಸೆ ಕೊಟ್ಟಿದ್ರು. ಕೊಟ್ಟ ಮಾತಿನಂತೆ ಇಂದು ನಡೆದುಕೊಂಡಿದ್ದಾರೆ.

ಅಪ್ಪು ನಮ್ಮ ನೆನಪಲ್ಲಿ ಯಾವಗಲೂ ಇರಬೇಕು ಅಂದ್ರೆ ಅವರು ಮಾಡಿದ ಪುಣ್ಯದ ಕೆಲಸವನ್ನ ನಾವು ಕಂಟಿನ್ಯೂ ಮಾಡಬೇಕು ಅನ್ನೋದು ಪ್ರಕಾಶ್‌ ರೈ ಆಸೆ, ಅಪ್ಪು ನೆನಪನ್ನ ಜನಸೇವೆ ಮೂಲಕ ಯಾವಾಗಲೂ ಇರಿಸೋ ಸಲುವಾಗಿ ಪ್ರಕಾಶ್ ರೈ, ನಟ ಯಶ್, ಸೂರ್ಯ, ಚಿರಂಜೀವಿ, ಕೆವಿಎನ್ ವೆಂಕಟ್ ಸಹಾಯದೊಂದಿಗೆ ಮತ್ತೆ 5 ಹೊಸ ಆಂಬುಲೆನ್ಸ್ ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.

ಮಾರ್ಚ್‌ 26 ಅಂದ್ರೆ ಇಂದು ಪ್ರಕಾಶ್‌ ರೈ ಅವರ ಹುಟ್ಟಿದ ಹಬ್ಬ. ಇದೇ ಸಂದರ್ಭದಲ್ಲಿ ಅಪ್ಪು ಎಕ್ಸ್‌ಪ್ರೆಸ್‌ ಅಂಬುಲೆನ್ಸ್‌ಗೆ ಯಶ್‌ ಮಾಡಿದ ಸಹಾಯದ ಬಗ್ಗೆ ಪ್ರಕಾಶ್‌ ರೈ ಮಾತನಾಡಿದಾರೆ. “ಪುನೀತ್‌ ರಾಜ್‌ಕುಮಾರ್‌ ಯಾವಾಗಲೂ ನಮ್ಮ ಜೊತೆ ಇರಬೇಕು ಅಂದ್ರೆ ಅವರು ಮಾಡಿದ ಪುಣ್ಯದ ಕೆಲಸವನ್ನ ನಾವು ಮುಂದುವರೆಕೊಂಡು ಹೋದ್ರೆ ಮಾತ್ರ ಸಾಧ್ಯ. ಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕಾಗಿದೆ. ಹಾಗಾಗಿ ನಾನು ನನ್ನ ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಅಪ್ಪು ಎಕ್ಸ್​ಪ್ರೆಸ್ ಕನಸು ಕಂಡೆ. ಪ್ರತಿಜಿಲ್ಲೆಗೂ ಅಪ್ಪು ಎಕ್ಸ್​ಪ್ರೆಸ್ ಆಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ ಅದರ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬುಲೆನ್ಸ್ ವಿತರಿಸುತ್ತಿದ್ದೇವೆ” ಆದರೆ ಈ ಬಾರಿ ನಾನು ಒಬ್ಬಂಟಿಯಲ್ಲ. ನಮ್ಮೊಂದಿಗೆ ಮೆಗಾಸ್ಟಾರ್ ಚಿರಂಜೀವಿ, ನಟ ಸೂರ್ಯ, ಮುಖ್ಯವಾಗಿ ನಮ್ಮೆಲ್ಲರ ಪ್ರೀತಿಯ ಯಶ್ ಹಾಗೂ ವೆಂಕಟ್ ಅವರುಗಳು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಆಂಬುಲೆನ್ಸ್ ವಿತರಣೆಯನ್ನು ದೊಡ್ಡ ಸಮಾರಂಭ ಮಾಡಿ ಮಾಡಬಹುದಿತ್ತು. ಸಮಾರಂಭ ಮಾಡಲು ಖರ್ಚಾಗುವ ಹಣದಲ್ಲಿ ಇನ್ನೊಂದು ಆಂಬುಲೆನ್ಸ್ ಖರೀದಿ ಮಾಡಬಹುದೆಂದು ನಾನು ಯಶ್‌ ಯೋಚಿಸಿ ಈ ರೀತಿ ಸಿಂಪಲ್‌ ಆಗಿ ಹೇಳ್ತಾ ಇದೀವಿ ಹಾಗಾಗಿ ಅಬ್ಬರವಿಲ್ಲದೆ ಸರಳವಾಗಿ ವಿತರಣೆ ಮಾಡುತ್ತಿದ್ದೇವೆ. ಇದರ ಹಿಂದೆ ರಾಜಕಾರಣ ಅಂತ ಕಾಲೆಳೆಯೋರು ಇದಾರೆ, ಹೌದು ಇದು ರಾಜಕಾರಣನೇ, ನನ್ನ ಮತ್ತು ಯಶ್‌ನ ರಾಜಕಾರಣ. ಪ್ರೀತಿಯನ್ನ ಹಂಚುವ ರಾಜಕಾರಣ, ಮಾನವೀಯತೆಯನ್ನ ಮೆರೆಯುವ ರಾಜಕಾರಣ,ನಮ್ಮೆಲ್ಲರ ಪ್ರೀತಿಯ ಪುನೀತ್‌ ರಾಜ್‌ಕುಮಾರ್‌ ಅವರನ್ನ ಸಂಭ್ರಮಿಸುವ ರಾಜಕಾರಣ ”ಎಂದು ಪ್ರಕಾಶ್‌ ರೈ ಹೇಳಿದರು. ಇಂಹತ ಸಮಾಜಮುಖಿ ಕಾರ್ಯಗಳು ಹೀಗೆ ಸಾಗ್ತಾ ಇರಲಿ ಅಂತ ಆಶಿಸೋಣ.

-masthmagaa.com

Contact Us for Advertisement

Leave a Reply