ED ಚಾರ್ಜ್‌ಶೀಟ್‌ನಲ್ಲಿ ಪ್ರಿಯಾಂಕ ಹೆಸರು: ಮತ್ತೊಮ್ಮೆ ಸಂಕಟ?

masthmagaa.com:

ಜಾರಿ ನಿರ್ದೇಶನಾಲಯ EDಯ ಮನಿ ಲಾಂಡ್ರಿಂಗ್‌ ಕೇಸ್‌ನ ಚಾರ್ಜ್‌ ಶೀಟ್‌ ಒಂದ್ರಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೆಸರು ಮೆನ್ಶನ್‌ ಮಾಡಲಾಗಿದೆ. ರಕ್ಷಣಾ ಉಪಕರಣಗಳ ಡೀಲರ್‌ ಸಂಜಯ್‌ ಭಂಡಾರಿ ಕೇಸ್‌ನ ಚಾರ್ಜ್‌ ಶೀಟ್‌ನಲ್ಲಿ ಪ್ರಿಯಾಂಕ ಹೆಸರು ಸೇರಿದೆ. ಆದ್ರೆ ಯಾವ್ದೆ ರೀತಿ ಆರೋಪ ಮಾಡಲಾಗಿಲ್ಲ. ಭಂಡಾರಿಗೆ ಸಂಬಂಧಿಸಿದ ಲಂಡನ್‌ನ ಪ್ರಾಪರ್ಟಿ ಒಂದನ್ನ ಪ್ರಿಯಾಂಕ ಪತಿ ರಾಬರ್ಟ್‌ ವಾದ್ರಾ ರಿನೋವೇಟ್‌ ಮಾಡಿ ಅದ್ರಲ್ಲಿ ಉಳ್ಕೊಂಡಿದ್ರು ಅಂತ ಚಾರ್ಜ್‌ ಶೀಟ್‌ನಲ್ಲಿದೆ. ಅಲ್ಲದೆ ರಾಬರ್ಟ್‌ ಹಾಗೂ ಪ್ರಿಯಾಂಕ ಹರ್ಯಾಣದಲ್ಲಿ ಒಂದಷ್ಟು ಜಮೀನನ್ನ ಖರೀದಿಸಿ ಕೆಲವು ವರ್ಷಗಳ ನಂತರ ಮಾರಿದ್ದಾರೆ ಅಂತ ನಮೂದಿಸಲಾಗಿದೆ. ವಾದ್ರಾ ಅವ್ರನ್ನ ED ಈ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದೆ.

-masthmagaa.com

Contact Us for Advertisement

Leave a Reply