ಅಮೆರಿಕ ಯುನಿವರ್ಸಿಟಿನಲ್ಲಿ ಹೆಚ್ಚಿದ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ!

masthmagaa.com:

ಗಾಜಾದಲ್ಲಿ ನಡೀತಿರೋ ಇಸ್ರೇಲ್‌ ದಾಳಿ ಅಮೆರಿಕದಾದ್ಯಂತ, ಅದರಲ್ಲೂ ಅಮೆರಿಕದ ಯುನಿವರ್ಸಿಟಿಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಇಸ್ರೇಲ್‌ ಪರ ಒಂದಷ್ಟು ಜನ, ಪಾಲೇಸ್ತೇನ್‌ ಪರ ಪ್ರತಿಭಟನೆ ನಡೆಸ್ತಿದ್ದಾರೆ. ಇದೀಗ ನ್ಯೂಯಾರ್ಕ್‌ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಪಾಲೇಸ್ತೇನ್‌ ಪರ ಪ್ರತಿಭಟನೆ ನಡೀತಿದ್ದು… 133ಕ್ಕೂ ಅಧಿಕ ಜನರನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದಕ್ಕೆ ಅನೇಕರು ಕಿಡಿಕಾರಿದ್ದು ಅಮೆರಿಕ ಪೊಲೀಸರ ವಿರುದ್ದ ಹರಿಹಾಯ್ತಿದ್ದಾರೆ. ಇನ್ನು ಕಳೆದ ಒಂದು ವಾರದಿಂದ ಅಮೆರಿಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ಕೊಲಂಬಿಯಾ, ಯೇಲ್‌ ಮತ್ತು ನ್ಯೂಯಾರ್ಕ್‌ ಯುನಿವರ್ಸಿಟಿಗಳು ಈ ಪ್ರತಿಭಟನೆಗೆ ಕೇಂದ್ರ ಪ್ರದೇಶವಾಗ್ಬಿಟ್ಟಿದೆ. ವಿದ್ಯಾರ್ಥಿಗಳು ಗುಂಪು ಕಟ್ಕೊಂಡು ಈ ಪ್ರತಿಭಟನೆ ನಡೆಸ್ತಿದ್ದು, ಕಾಲೇಜಲ್ಲಿ ಪಾಠ ಮಾಡೋಕೆ ಆಗ್ತಿಲ್ಲ. ಭಾರೀ ಅಡ್ಡಿ ಉಂಟಾಗ್ತಿದೆ ಅಂತ ಅಲ್ಲಿನ ಯೂನಿವರ್ಸಿಟಿ ಆಡಳಿತಗಳು ಹೇಳ್ತಿವೆ. ಜೊತೆಗೆ ಕಳೆದ ವಾರ 100 ಪ್ಯಾಲೆಸ್ತೀನ್‌ ಪರ ಬೆಂಬಲಿಗರು ಅರೆಸ್ಟ್‌ ಆಗಿದ್ರು. ಇದಾದ ಮೇಲಂತೂ ಈ ಪ್ರತಿಭಟನೆ ಇನ್ನಷ್ಟು ಕಾವೇರ್ತಿದೆ.

-masthmagaa.com

Contact Us for Advertisement

Leave a Reply