ಹೆಂಡತಿಯ ರುಂಡ ಹಿಡಿದು ಓಡಾಡಿದ ಗಂಡ! ಎಲ್ಲಿ, ಯಾಕೆ?

masthmagaa.com:

ವ್ಯಕ್ತಿಯೊಬ್ಬ ತನ್ನ ಹೆಂಡತಿಯ ರುಂಡವನ್ನ ಹಿಡಿದು ಬೀದಿಯಲ್ಲಿ ರಾಜಾರೋಷವಾಗಿ ಓಡಾಡಿರೋ ಘಟನೆ ಇರಾನ್​ನಲ್ಲಿ ನಡೆದಿದೆ. ಈ ಘಟನೆಯಿಂದ ಇಡೀ ಇರಾನ್​ ಬೆಚ್ಚಿಬಿದ್ದಿದೆ. ಕೊಲೆಯಾದ ಯುವತಿಯನ್ನ 17 ವರ್ಷದ ಮೋನಾ ಹೀದರಿ ಅಂತಾ ಗುರ್ತಿಸಲಾಗಿದೆ. ಈಕೆಗೆ ಮೂರು ವರ್ಷದ ಮಗು ಇದೆ. ಈಕೆಯ ಕೊಲೆಗೆ ಪತಿಯ ತಮ್ಮನೂ ಸಹಕರಿಸಿದ್ದ. ಇಬ್ಬರನ್ನೂ ಇರಾನ್‌ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಯುವತಿಯನ್ನ 12 ವರ್ಷಕ್ಕೇ ಮದುವೆ ಮಾಡಲಾಗಿತ್ತು ಅನ್ನೋದು ಗೊತ್ತಾಗಿದೆ. ಇರಾನ್ ನಲ್ಲಿ ಹೆಣ್ಮಕ್ಕಳ ಕನಿಷ್ಠ ಮದುವೆ ವಯಸ್ಸು 13 ವರ್ಷ. ಆದ್ರೆ ಈಕೆಗೆ 12 ವರ್ಷಕ್ಕೆ ಮದ್ವೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

-masthmagaa.com

Contact Us for Advertisement

Leave a Reply