ಕೆಲಸದಿಂದ ‘ಫೈರ್’ ಮಾಡಿದ್ದಕ್ಕೆ ಲೇಡಿ ಬಾಸ್—ಗೇ ಫೈರ್ ಇಟ್ಟ ಯುವಕ!

masthmagaa.com:

ತನ್ನನ್ನ ಕೆಲಸದಿಂದ ತೆಗೆದು ಹಾಕಿದ್ರು, ಫೈರ್ ಮಾಡಿದ್ಲು ಅನ್ನುವ ಸಿಟ್ಟಿಗೆ ಓನರ್‌ಗೆ ಫೈರ್ ಇಟ್ಟು ಕೊಂದ ಘಟನೆ ಆಗಿದೆ. ಪುಣೆಯ ಸೋಮನಾಥ ನಗರದಲ್ಲಿ ಈ ಥರ ಆಗಿದೆ. 32 ವರ್ಷದ ಮಿಲಿಂದ್‌ ಕುಮಾರ್‌ ಎಂಬಾತ ಕೆಲಸದಿಂದ ತೆಗೆದುಹಾಕಿದ 8 ದಿನಗಳ ನಂತ್ರ ಬಂದು ಮಹಿಳಾ ಬಾಸ್ ಗೆ ಬೆಂಕಿ ಇಟ್ಟು ಸುಟ್ಟಿದ್ದಾನೆ. ಟ್ವಿಸ್ಟ್ ಏನಂದ್ರೆ, ಬೆಂಕಿ ಇಡೋಕೆ ಹೋದ ಯುವಕನೂ ಬೆಂಕಿ ಹತ್ತಿಕೊಂಡು ಮೃತ ಪಟ್ಟಿದ್ದಾನೆ. ಈ ವೇಳೆ ಕಾಪಾಡಲು ಹೋದ ಇನೊಬ್ಬ ವ್ಯಕ್ತಿಗು ಸುಟ್ಟಗಾಯಗಳಾಗಿವೆ.

-masthmagaa.com

Contact Us for Advertisement

Leave a Reply