ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್” ಸಿನಿಮಾ ಚಿತ್ರೀಕರಣ ಜುಲೈ 5 ರಿಂದ ಶುರು!!

masthmagaa.com:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ಚಿತ್ರೀಕರಣ ಜುಲೈ 5 ರಿಂದ ಪುನಾರಾರಂಭ ಆಗಲಿದೆ. ಈಗಾಗಲೇ ಜೇಮ್ಸ್ ಸಿನಿಮಾ ಶೂಟಿಂಗ್ ಶೇ. 70 ರಷ್ಟು ನಡೆದಿದೆ, ಈ ವರ್ಷದ ಆರಂಭದಲ್ಲಿ ಕಾಶ್ಮೀರದಲ್ಲಿ  ಏಪ್ರಿಲ್ ತಿಂಗಳಲ್ಲಿ 7 ದಿನಗಳ ಶೂಟಿಂಗ್ ನಡೆಸಿದ್ದರು. ಆದರೆ ಉಳಿದ ಭಾಗದ ಶೂಟಿಂಗ್ ಬಾಕಿಯಿತ್ತು, ಅದನ್ನು ಪೂರ್ಣಗೊಳಿಸುವ ವೇಳೆ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಆಕ್ಷನ್ ಕಮರ್ಷಿಯಲ್ ಸಿನಿಮಾದ ಶೇ. 30 ರಷ್ಟು ಭಾಗದ ಶೂಟಿಂಗ್ ಮಾತ್ರ ಉಳಿದಿದೆ.

ನಿರ್ಮಾಪಕ ಕಿಶೋರ್ ಪಾತಿಕೊಂಡ , ಪುನೀತ್ ಮತ್ತು ನಿರ್ದೇಶಕ ಚೇತನ್ ಕುಮಾರ್ ಮೊದಲ ಬಾರಿಗೆ ಈ ಸಿನಿಮಾಗಾಗಿ ಒಂದಾಗಿದ್ದಾರೆ. ಜೇಮ್ಸ್ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಈ ಹಿಂದೆ ಪುನೀತ್ ಮತ್ತು ಪ್ರಿಯಾ ರಾಜಕುಮಾರ ಸಿನಿಮಾದಲ್ಲಿ ಜೋಡಿಯಾಗಿದ್ದರು. ಜೇಮ್ಸ್ ಸಿನಿಮಾದಲ್ಲಿ ತೆಲುಗು ನಟ ಮೆಕಾ ಶ್ರೀಕಾಂತ್, ಅನು ಪ್ರಭಾಕರ್, ಆದಿತ್ಯ ಮೆನನ್, ರಂಗಾಯಣ ರಘು ಮತ್ತು ಮುಖೇಶ್ ರಿಷಿ ಸೇರಿದಂತೆ  ಪ್ರಮುಖರು ನಟಿಸಿದ್ದಾರೆ.

masthmagaa.com

Contact Us for Advertisement

Leave a Reply