ಜಲಿಯನ್ ವಾಲಾಬಾಗ್ ಸೆಂಟೇನರಿ ಮೆಮೋರಿಯಲ್ ಪಾರ್ಕ್​​​ ಉದ್ಘಾಟನೆ

masthmagaa.com:

ಪಂಜಾಬ್​​ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್​​ ಜಲಿಯನ್ ವಾಲಾಬಾಗ್ ಸೆಂಟೇನರಿ ಮೆಮೋರಿಯಲ್ ಪಾರ್ಕ್ ಉದ್ಘಾಟನೆ ಮಾಡಿದ್ದಾರೆ. 1919ರ ಏಪ್ರಿಲ್ 3ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಮಡಿದವರ ನೆನಪಿಗಾಗಿ ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಅಮರಿಂದರ್ ಸಿಂಗ್​, ಈ ಹತ್ಯಾಕಾಂಡದಲ್ಲಿ ಎಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಕರೆಕ್ಟ್ ಲೆಕ್ಕ ಇಲ್ಲ. ಡಿಸಿ ಕಚೇರಿಯಲ್ಲಿ ಈ ಘಟನೆಯಲ್ಲಿ ಮಡಿದ 448 ಮಂದಿಯ ಹೆಸರು ಇದೆ. ಜನರಲ್ ಡಯರ್ 1250 ಬುಲೆಟ್ ಫೈರ್ ಮಾಡಿದ್ದ ಅಂತ ಹೇಳಿದ್ದಾರೆ. ಅಂದಹಾಗೆ ಆ ದಿನ ಜಲಿಯನ್ ವಾಲಾಬಾಗ್​ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಂಧನ ವಿರೋಧಿಸಿ ಜನ ಸೇರಿದ್ರು. ಈ ವೇಳೆ ಅಲ್ಲಿಗೆ ಬಂದು ಸುತ್ತುವರಿದ ದುಷ್ಟ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಗುಂಡಿನ ಮಳೆ ಸುರಿಸಿದ್ದ.

-masthmagaa.com

Contact Us for Advertisement

Leave a Reply