ನಾವಲ್ನಿಯ ಮೃತ ದೇಹವನ್ನ ಅವ್ರ ತಾಯಿಗೆ ಹಸ್ತಾಂತರಿಸಿದ ಸರ್ಕಾರ!

masthmagaa.com:

ರಷ್ಯಾಧ್ಯಕ್ಷ ಪುಟಿನ್‌ ವಿರೋಧಿ ಅಲೆಕ್ಸಿ ನಾವಲ್ನಿಯ ಮೃತ ದೇಹವನ್ನ ಸಲೇಖಾರ್ಡ್‌ ನಗರದಲ್ಲಿ ಖುದ್ದು ಅಲೆಕ್ಸಿ ಅವ್ರ ತಾಯಿಗೆ ರಷ್ಯಾ ಸರ್ಕಾರ ನೀಡಿದೆ. ಹೀಗಂತ ಸ್ವತಃ ಮೃತ ಅಲೆಕ್ಸಿಯ ವಕ್ತಾರ ಕಿರಾ ಯರ್ಮಿಶ್ ತಿಳಿಸಿದ್ದಾರೆ. ಅಲ್ದೇ ಈ ವಿಚಾರವಾಗಿ ನಮ್ಮನ್ನ ಬೆಂಬಲಿಸಿದವರಿಗೆ ಥ್ಯಾಂಕ್ಯೂ ಕೂಡ ಹೇಳಿದ್ದಾರೆ ಜೊತೆಗೆ ಅಲೆಕ್ಸಿ ಅವ್ರ ಅಂತ್ಯಕ್ರಿಯೆ ಪ್ರಕ್ರಿಯೆ ಹಾಗೂ ಅದ್ರಲ್ಲಿ ಸರ್ಕಾರದ ಅಧಿಕಾರಿಗಳು ಭಾಗಿಯಾಗ್ತಾರೆ ಅನ್ನೊ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ ಅಂತ ಕಿರಾ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಅಂದ್ಹಾಗೆ ಫೆಬ್ರುವರಿ16 ರಂದು ಜೈಲಿನಲ್ಲಿ ಮೃತ ಪಟ್ಟಿದ್ದ ಅಲೆಕ್ಸಿ ಅವ್ರ ಮೃತ ದೇಹವನ್ನ ನೀಡುವಂತೆ ಅವ್ರ ತಾಯಿ ಲ್ಯುಡ್ಮಿಲಾ ಹಾಗೂ ಬೆಂಬಲಿಗಲಿಗರು ಕಳೆದ ವಾರದಿಂದಲೂ ರಷ್ಯಾ ಸರ್ಕಾರಕ್ಕೆ ಆಗ್ರಹಿಸಿದ್ರು. ಇನ್ನೊಂದ್ಕಡೆ ಅಲೆಕ್ಸಿ ಅವ್ರ ಶವಸಂಸ್ಕಾರವನ್ನ ರಹಸ್ಯವಾಗಿ ಮಾಡೊಕೆ ಮುಂದಾಗಿದೆ ಅಂತ ಲ್ಯುಡ್ಮಿಲಾ ಆರೋಪಿಸಿದ್ರು. ಅಲ್ದೇ ಅಲೆಕ್ಸಿ ಅವ್ರ ಮೃತದೇಹವನ್ನ ಸಾರ್ವಜನಿಕವಾಗಿ ಶವ ಸಂಸ್ಕಾರ ನಡೆಸಿರಲು ಸರ್ಕಾರ ನಿರ್ಧರಿಸತ್ತು. ಆದ್ರೆ ಇದೆಲ್ಲದ್ರ ಮಧ್ಯೆ ಅಂತಿಮವಾಗಿ ಅಲೆಕ್ಸಿ ಮೃತದೇಹವನ್ನ ಲ್ಯುಡ್ಮಿಲಾ ಅವ್ರಿಗೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply