ರಷ್ಯಾದ ಕಠಿಣ ಜೈಲಿಗೆ ನಾಪತ್ತೆಯಾದ ಪುಟಿನ್‌ ವಿರೋಧಿ ಟ್ರಾನ್ಸ್‌ಫರ್‌!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರೋಧಿ ಮತ್ತವ್ರ ಪ್ರತಿಸ್ಪರ್ಧಿ ಅಲೆಕ್ಸಿ ನವಲ್ನಿ ಇದೀಗ ರಷ್ಯಾದ ಉತ್ತರ ಭಾಗದ ಜೈನಲ್ಲಿದ್ದಾರೆ ಅಂತ ವರದಿಯಾಗಿದೆ. ಹೌದು ರಷ್ಯಾ ಜೈಲಿನಿಂದ ಸಡನ್‌ ಆಗಿ ನಾಪತ್ತೆಯಾಗಿದ್ದ ಅಲೆಕ್ಸಿ ನವಲ್ನಿ ಈಗ ಅಲ್ಲಿನ ಎಮಲೋ-ನೆನೆಟಸ್‌ ಪ್ರದೇಶದ ʻದಿ ಪೋಲಾರ್‌ ವುಲ್ಫ್‌ʼ (The Polar Wolf) ಅನ್ನೋ ಜೈಲಿನಲ್ಲಿದ್ದಾರೆ ಅಂತ ಗೊತ್ತಾಗಿದೆ. ಹೀಗಂತ ಅಲೆಕ್ಸಿ ನವಲ್ನಿ ಅವ್ರ ವಕ್ತಾರರೊಬ್ರು ಡಿಸೆಂಬರ್‌ 25 ರಂದು ಹೇಳಿದ್ದಾರೆ. 2021 ರಿಂದ ರಷ್ಯಾದ ಮೆಲಿಖೋವೊ ಜೈಲಿನಲ್ಲಿದ್ದ ನವಲ್ನಿ ಅವ್ರನ್ನ ಈಗ ಅತಿಯಾದ ಚಳಿಯಿರೋ ಆರ್ಕ್ಟಿಕ್‌ ವೃತ್ತದ ಪ್ರದೇಶದಲ್ಲಿ ಇಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿರೋ ಅವ್ರ ವಕ್ತಾರರು, ʻಈ ಜೈಲು, ನವಲ್ನಿ ಅವ್ರು ಹಿಂದೆ ಇದ್ದ ಜೈಲಿನಿಂದಲೂ ಬಹಳ ವರ್ಸ್ಟ್‌ ಆಗಿದೆ. ನವಲ್ನಿ ಅವ್ರಿಗೆ ಸಿಕ್ಕಾಪಟ್ಟೆ ಕಷ್ಟ ಕೊಡಲಾಗ್ತಿದೆ. ನವಲ್ನಿ ಅವ್ರನ್ನ ಎಷ್ಟಾಗತ್ತೋ ಅಷ್ಟು ನಮ್ಮಿಂದ ಬೇರೆ ಮಾಡೋಕೆ ಟ್ರೈ ಮಾಡಿ, ಅವ್ರ ಆ್ಯಕ್ಸೆಸ್‌ ಪಡೆಯೋಕಾಗದಿರೋ ಹಾಗೇ ಮಾಡ್ತಿದ್ದಾರೆʼ ಅಂತ ಹೇಳಿದ್ದಾರೆ. ಇನ್ನು ನವಲ್ನಿ ಅವ್ರನ್ನ ಇರಿಸಲಾದ ʻದಿ ಪೋಲಾರ್‌ ವುಲ್ಫ್‌ʼ ರಷ್ಯಾದಲ್ಲೇ ಅತ್ಯಂತ ಕಠಿಣವಾಗಿರೋ ಜೈಲು. ಅಲ್ಲಿನ ಚಳಿಗಾಳ ವಿಪರೀತವಾಗಿದ್ದು, ಮುಂದಿನ ವಾರ ಅಲ್ಲಿನ ಟೆಂಪರೇಚರ್‌ -28 ಡಿಗ್ರೀ ಸೆಲ್ಸಿಯಸ್‌ಗೆ ಡ್ರಾಪ್‌ ಆಗಲಿದೆ ಅಂತ ಹೇಳಲಾಗ್ತಿದೆ. ಅಂದ್ಹಾಗೆ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ನವಲ್ನಿ, ಡಿಸೆಂಬರ್‌ 6 ರಿಂದ ಅವ್ರ ಟೀಮ್‌ಗೂ ಕೂಡ ಅವ್ರನ್ನ ಸಂಪರ್ಕಿಸೋಕೆ ಆಗ್ತಿರ್ಲಿಲ್ಲ ಅಂತ ಹೇಳಲಾಗ್ತಿತ್ತು. ಆದ್ರೆ ಈಗ ನವಲ್ನಿಯವ್ರು ಎಲ್ಲಿದ್ದಾರೆ ಅಂತ ಅವ್ರ ಬೆಂಬಲಿಗರಿಗೆ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply