ರಷ್ಯಾ ಅಧ್ಯಕ್ಷ ಪುಟಿನ್ ಬ್ರಿಟನ್​​ಗೆ ಕೊಟ್ಟ ವಾರ್ನಿಂಗ್ ಏನು?

masthmagaa.com:

ದೇಶದ ರಕ್ಷಣೆ ದೃಷ್ಟಿಯಿಂದ ಯಾವುದೇ ರೀತಿಯ ಜಲಾಂತರ್ಗಾಮಿ ಅಥವಾ ವಾಯುಕ್ಷೇತ್ರದಲ್ಲಿ ಬರೋ ಶತ್ರುಗಳ ವಿರುದ್ಧ ಸ್ಟ್ರೈಕ್ ನಡೆಸಲು ರಷ್ಯಾ ನೌಕಾಪಡೆ ಸ್ವತಂತ್ರವಾಗಿದೆ ಅಂತ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಅಷ್ಟೇ ಅಲ್ಲ.. ರಷ್ಯಾ ತನ್ನ ಅತ್ಯಾಧುನಿಕ ಏರ್ ಡಿಫೆನ್ಸ್ ಸಿಸ್ಟಂ ಎಸ್​​​-500 ಮತ್ತು ಜಿರ್ಕಾನ್​​ ಹೈಪರ್​ಸಾನಿಕ್ ಮಿಸೈಲ್ ಪರೀಕ್ಷೆ ಕೂಡ ನಡೆಸಿದೆ. ನೌಕಾ ದಿನಾಚರಣೆ ಹಿನ್ನೆಲೆಯಲ್ಲಿ ಸೈಂಟ್ ಪೀಟರ್ಸ್​​​ಬರ್ಗ್​​​ನಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಪುಟಿನ್​, ನಾವು ನೀರಿನ ಒಳಗೆ, ನೀರಿನ ಮೇಲೆ ಮತ್ತು ಆಕಾಶದಲ್ಲಿ ಬರೋ ಶತ್ರುಗಳನ್ನು ಗುರುತಿಸೋ ತಾಕತ್ತು ಹೊಂದಿದೀವಿ. ಅಗತ್ಯ ಬಿದ್ರೆ ನಾವು ದಾಳಿ ನಡೆಸೋಕೂ ರೆಡಿ ಇದ್ದೀವಿ. ಅದಕ್ಕೆ ಏನೇನ್ ಬೇಕೋ ಎಲ್ಲವೂ ನಮ್ಮ ನೌಕಾಪಡೆ ಬಳಿ ಇದೆ ಅಂತ ಹೇಳಿದ್ದಾರೆ. ಅಂದಹಾಗೆ ಇತ್ತೀಚೆಗಷ್ಟೇ ಬ್ರಿಟನ್ ಯುದ್ಧನೌಕೆ ಕ್ರಿಮಿಯಾಗೆ ಹತ್ತಿರದಲ್ಲೇ ಹಾದು ಹೋದ ಬಳಿಕ ಉಭಯದೇಶಗಳ ನಡುವೆ ಸಂಘರ್ಷದ ಪರಿಸ್ಥಿತಿ ಇದೆ. 2014ರಲ್ಲಿ ರಷ್ಯಾ ಯುಕ್ರೇನ್​​ನಿಂದ ಈ ಕ್ರಿಮಿಯಾವನ್ನು ವಶಕ್ಕೆ ಪಡ್ಕೊಂಡಿತ್ತು. ಆದ್ರೆ ಇಂದಿಗೂ ಅಂತಾರಾಷ್ಟ್ರೀಯ ಸಮುದಾಯ ಅದನ್ನು ಒಪ್ಪಿಕೊಳ್ಳೋದಿಲ್ಲ. ಕ್ರಿಮಿಯಾ ಯುಕ್ರೇನ್​​ದೇ ಭಾಗ ಅಂತ ಪರಿಗಣಿಸುತ್ತೆ. ಹೀಗಾಗಿಯೇ ಅದರ ಪಕ್ಕದಲ್ಲಿ ಹಾದು ಹೋಗಿತ್ತು ಬ್ರಿಟನ್ ಯುದ್ಧನೌಕೆ. ಈ ವೇಳೆ ರಷ್ಯಾ ಯುದ್ಧವಿಮಾನಗಳನ್ನು ಕಳುಹಿಸಿ ದಾಳಿಗು ಮುಂದಾಗಿತ್ತು.

-masthmagaa.com

Contact Us for Advertisement

Leave a Reply