ಇಸ್ರೇಲ್‌ ದಾಳಿಗೆ ರಫಾ ನಗರದಲ್ಲಿ ಐವರು ಮಕ್ಕಳು ಸೇರಿದಂತೆ 13 ಬಲಿ!

masthmagaa.com:

ಕದನ ವಿರಾಮಕ್ಕೆ ಒಪ್ಪದ ಇಸ್ರೇಲ್‌ ಗಾಜಾದಲ್ಲಿ ತನ್ನ ಭೀಕರ ದಾಳಿ ಮುಂದುವರೆಸಿದೆ. ಗಾಜಾ ಪ್ರದೇಶದ ರಫಾ ನಗರದಲ್ಲಿ ಇಸ್ರೇಲ್‌ ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ 13 ಜನ ಸಾವನ್ನಪ್ಪಿದ್ದಾರೆ. ಇಸ್ರೇಲ್‌ ಆಕ್ರಮಣದಿಂದಾಗಿ 2.3 ಮಿಲಿಯನ್‌ ಅಂದ್ರೆ 23ಲಕ್ಷ ಜನ ಗಾಜಾ ಪ್ರದೇಶದ ಅರ್ಧ ಜನ ಈಜಿಪ್ಟ್‌ ಬಾರ್ಡರ್‌ನತ್ತ ಪಲಾಯನ ಮಾಡಿದ್ದಾರೆ. ಇನ್ನು ಕೆಲವರು ತಾತ್ಕಾಲಿಕ ಶೆಡ್‌ಗಳಲ್ಲಿ ಅನಿವಾರ್ಯವಾಗಿ ಅಲ್ಲೆ ವಾಸ ಮಾಡ್ತಿದ್ದಾರೆ. ಇನ್ನೊಂದೆಡೆ ಸೌತ್‌ ಲೆಬೆನಾನ್‌ನ ನಬಾತಿಹ್‌ ನಗರದಲ್ಲಿ ಇಸ್ರೇಲ್‌ ಡ್ರೋನ್‌ ದಾಳಿ ವೇಳೆ 3 ಜನ ಗಾಯ ಗೊಂಡಿದ್ದಾರೆ. ಇನ್ನು ಇದ್ರ ಪ್ರತೀಕಾರಕ್ಕಾಗಿ ನಾವು ಇಸ್ರೇಲ್‌ನ ಗೆಲಿಲಿ ಪ್ರದೇಶದಲ್ಲಿ ಡಜನ್‌ ಗಟ್ಟಲೇ ರಾಕೆಟ್‌ಗಳ ಮೂಲಕ ದಾಳಿ ಮಾಡಿದ್ದೇವೆ ಅಂತ ಹಿಜ್ಬುಲ್ಲಾ ಪಡೆ ಹೇಳಿದೆ. ಮತ್ತೊಂದೆಡೆ ಗಾಜಾ ಕದನದಲ್ಲಿ ಇಸ್ರೇಲ್‌ ದಾಳಿ ಮುಂದುವರೆದಿದ್ದು, ಇದನ್ನ ನಿಲ್ಲಿಸಲು ನಾವು ಪ್ರಯತ್ನ ಮಾಡ್ತಿದ್ದೇವೆ ಅಂತ ಅಮೆರಿಕನ್‌ ಪ್ರೆಸಿಡೆಂಟ್‌ ಜೊ ಬೈಡನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply