ಚುನಾವಣಾ ಬಾಂಡ್‌ ವಿಶ್ವದ ದೊಡ್ಡ ಸುಲಿಗೆ: ರಾಹುಲ್‌ ಗಾಂಧಿ

masthmagaa.com:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚುನಾವಣಾ ಬಾಂಡ್‌ನ್ನ ʻವಿಶ್ವದ ಅತೀದೊಡ್ಡ ಸುಲಿಗೆಯ ಯೋಜನೆʼ ಅಂತ ಕರೆದಿದ್ದಾರೆ. ಅಷ್ಟೇ ಅಲ್ದೇ ಪ್ರಧಾನಿ ನರೇಂದ್ರ ಮೋದಿಯವ್ರು ಭ್ರಷ್ಟಚಾರದ ಚಾಂಪಿಯನ್‌ ಅಂತಾನೂ ಟೀಕಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿಯವ್ರ ಇಂಟರ್‌ವ್ಯೂ ಒಂದನ್ನ ಕುರಿತು ಮಾತನಾಡಿದ ರಾಹುಲ್‌, ಅವೆಲ್ಲಾ ಸ್ಕ್ರಿಪ್ಟೆಡ್‌ ಮತ್ತು ಫ್ಲಾಪ್‌ ಶೋ ಅಂತ ಕರೆದಿದ್ದಾರೆ. ʻಚುನಾವಣೆ ಬಾಂಡ್‌ಗಳ ಮೂಲಕ ನಿಮಗೆ ಪಾರದರ್ಶಕತೆ ತರಬೇಕು ಅಂತಿದ್ರೆ, ಬಿಜೆಪಿಗೆ ದೇಣಿಗೆ ನೀಡಿದವ್ರ ಹೆಸರು ಯಾಕೆ ಮುಚ್ಚಿಡಲಾಗಿದೆ? ಕಂಪನಿಗಳು ಯಾವ ಡೇಟ್‌ನಲ್ಲಿ ಬಿಜೆಪಿಗೆ ದೇಣಿಗೆ ನೀಡಿದೆ ಅನ್ನೋದ್ರ ಬಗ್ಗೆ ಗೌಪ್ಯವಾಗಿ ಇಟ್ಟಿದ್ಯಾಕೆ? ಅಂತ ಆರೋಪ ಮಾಡಿದ್ದಾರೆ.
ಇನ್ನೊಂದ್ಕಡೆ ಲೋಕಸಭಾ ಚುನಾವಣೆಯಲ್ಲಿ, ಅಮೇಥಿಯಿಂದ ಯಾಕೆ ಸ್ಪರ್ಧಿಸ್ತಿಲ್ಲ ಅನ್ನೋ ಪ್ರಶ್ನೆಗೆ ರಾಹುಲ್, ʻನಾನು ಕಾಂಗ್ರೆಸ್‌ ಹೈಕಮಾಂಡ್‌ನಿಂದ ಬಂದ ಆದೇಶವನ್ನ ಪಾಲಿಸ್ತೇನೆ..ಅದರಂತೆಯೇ ನಡೆದುಕೊಳ್ತೇನೆ. ಈ ಬಗ್ಗೆ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply